ದಾವಣಗೆರೆ-ಫೆಬ್ರವರಿ
ಗೋವಾದ ರೇವಣದ ಶ್ರೀ ವಿಮಲೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಇತ್ತೀಚಿಗೆ ನಡೆದ ಸರ್ವ ಸದಸ್ಯರ
ಮಹಾಸಭೆಯಲ್ಲಿ ದಾವಣಗೆರೆಯ ಡಾ. ಅರುಣಾಚಲ ಎನ್.ರೇವಣಕರ್‌ರವರು ಸರ್ವಾನುಮತದಿಂದ
ಅವಿರೋಧವಾಗಿ ಉಪಾಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ ಎಂದು ಸಮಿತಿಯ ಅಧ್ಯಕ್ಷರಾದ ರಾಮನಾಥ ಪ್ರಭು ದೇಸಾಯಿ ತಿಳಿಸಿದ್ದಾರೆ.

ದೈವಜ್ಞ ಸಮಾಜದ ರೇವಣಕರ ಪರಿವಾರದ ಪದಾಧಿಕಾರಿಗಳು, ಸರ್ವ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಸರ್ವ ಸದಸ್ಯರ ಮಹಾಸಭೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿಗಂಬರ ಪ್ರಭು ದೇಸಾಯಿ, ಖಜಾಂಚಿ ನಾರಾಯಣ ಜಿ.ಪ್ರಭು ದೇಸಾಯಿ, ಸಹ ಕಾರ್ಯದರ್ಶಿ ಮಧೂರ ಎನ್.ಪ್ರಭು ದೇಸಾಯಿ, ಸಮಿತಿ ಸದಸ್ಯರಾದ ಜಯಂತ್ ಪ್ರಭು ದೇಸಾಯಿ, ಮಹೇಲ ಕೆ.ರೇವಣಕರ್, ದಾವಣಗೆರೆಯ ನಲ್ಲೂರು ಲಕ್ಷ್ಮಣರಾವ್ ನರಹರಿ ರೇವಣಕರ್ ಮುಂತಾದವರು ಉಪಸ್ಥಿತರಿದ್ದರು.