ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಇದರ ಮಾರ್ಗದರ್ಶಿ ಸಮಿತಿ ಸದಸ್ಯ ಹಾಗೂ ದ.ಕ. ಜಿಲ್ಲಾ ಮಂಗಳೂರು ತಾಲೂಕು ಕಸಾಪ ಇದರ ಗೌರವ ಕಾರ್ಯದರ್ಶಿಗಳಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಇದರ ಅಧ್ಯಕ್ಷರಾದ ನಾಡೋಜ ಡಾ|| ಮಹೇಶ್ ಜೋಶಿಯವರ ಜೊತೆ 12 ದಿನಗಳ ಕಾಲ ದಿನಾಂಕ: 30-10-2024 ರಿಂದ 11-11-2024 ರವರೆಗೆ ಯುರೋಪ್ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಮಯದಲ್ಲಿ ದುಬೈ ಮುಖಾಂತರ ಇಟೆಲಿ, ಹಾಲೆಂಡ್, ಪೋಲೇಂಡ್, ಸ್ಪೇನ್, ಜರ್ಮನಿ, ಸ್ವಿಜರ್‍ಲ್ಯಾಂಡ್, ಆಸ್ಟ್ರಿಯ, ಫ್ರಾನ್ಸ್,ಬೆಲ್ಜಿಯಂ ಮುಂತಾದ ದೇಶಗಳ ಕನ್ನಡ ಸಂಘಗಳಿಗೆ ಭೇಟಿ ನೀಡಿ ಮ್ಯೂನಿಚ್, ಜ್ಯೂರಿಚ್, ಬ್ರೂಸೆಲ್ಸ್, ಮಿಲಾನ್, ಪ್ರಾಂಕ್‍ಫರ್ಟ್, ಪ್ಯಾರಿಸ್,ಟ್ಯೂರಿನ್,ಅಮ್ಷ್ಟ್ರಡಾಮ್ ಮತ್ತು ಬಾರ್ಸಿಲೋನಾ ನಗರಗಳ ಕನ್ನಡ ಸಂಘಗಳ ಪದಾಧಿಕಾರಿಗಳ ಜೊತೆ ವಿಚಾರ ವಿನಿಮಯ ಮತ್ತು ಕನ್ನಡ ಸಂಘಗಳ ಜೊತೆಗೆ ಸಭೆಗಳನ್ನು ನಡೆಸಲಿದ್ದಾರೆ. ಮುಂದಿನ ವರ್ಷ ನವದೆಹಲಿಯಲ್ಲಿ ನಡೆಯುವ ವಿಶ್ವ ಕನ್ನಡ ಸಮ್ಮೇಳನದ ಪೂರ್ವ ತಯಾರಿಯಾಗಿ ಈ ಪ್ರವಾಸ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.