ದಾವಣಗೆರೆ: ಗದುಗಿನ ಶ್ರೀರಾಮ ಬಂಜಾರ ಭವನದ ಭವ್ಯ ದಿವ್ಯ ವೇದಿಕೆಯಲ್ಲಿ ಇತ್ತೀಚಿಗೆ ಡಾ. ಡಾ. ವ್ಹಿ.ಬಿ.ಹಿರೇಮಠ ಮೆಮೋರಿಯಲ್ ಪ್ರತಿಷ್ಥಾನ ಹಾಗೂ ಅಶ್ವಿನಿ ಪ್ರಕಾಶನ ಸಂಯುಕ್ತಾಶ್ರಯದಲ್ಲಿ ೩ನೇ ಸಾಹಿತ್ಯ ಸಮ್ಮೇಳನ ಹಾಗೂ ಡಾ. ವ್ಹಿ.ಬಿ.ಹಿರೇಮಠರವರ 11ನೇ ಪುಣ್ಯಸ್ಮರಣೆ ಮತ್ತು78ನೇ ಕನ್ನಡ ರಾಜ್ಯೊತ್ಸವದ ಪ್ರಯುಕ್ತ ದಾವಣಗೆರೆಯ ಬಹುಮುಖ ಪ್ರತಿಭೆ, ಗಾಯಕ, ಕವಿ, ಸಾಹಿತಿ, ಪತ್ರಕರ್ತ, ವಿವಿಧ ಸಂಘಟನೆಗಳ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ ಪಂಡಿತ ಪಂಚಾಕ್ಷರಿ ಗವಾಯಿಗಳವರ ರಾಷ್ಟ್ರೀಯ ಪ್ರಶಸ್ತಿ ವಿತರಿಸಲಾಯಿತು ಎಂದು ಸಂಸ್ಥೆಯ ಸಂಸ್ಥಾಪಕರಾದ ಡಾ. ವ್ಹಿ.ಬಿ.ಹಿರೇಮಠ ತಿಳಿಸಿದ್ದಾರೆ.
ಡಾ. ವ್ಹಿ.ಬಿ.ಹಿರೇಮಠದ ಮಹಾ ವೇದಿಕೆಯಲ್ಲಿ ನಾಡಿನ ಹಿರಿಯ ಸಾಹಿತಿಗಳು, ಕವಿ, ಕವಯತ್ರಿಯರು, ವಿದ್ವಾಂಸರು ಉಪಸ್ಥಿತರಿದ್ದು ವಿಜೃಂಭಣೆಯಿಂದ ನಡೆದ ಈ ಸನ್ಮಾನ ಸ್ವೀಕರಿಸಿದ ಶೆಣೈಯವರಿಗೆ ಕಲಾಕುಂಚ, ಯಕ್ಷರಂಗ, ಸಿನಿಮಾಸಿರಿ, ಕರ್ನಾಟಕ ಸಗಮ ಸಂಗೀತ ಪರಿಷತ್, ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ, ಸಿನಿಮಾಸಿರಿ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ ಮುಂತಾದ ಅನೇಕ ಸಂಘಟನೆಗಳ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿಮಾನದಿಂದ ಅಭಿನಂದನೆ ಸಲ್ಲಿಸಿದ್ದಾರೆ.
ಡಾ. ಡಾ. ವ್ಹಿ.ಬಿ.ಹಿರೇಮಠ ಮೆಮೋರಿಯಲ್ ಪ್ರತಿಷ್ಥಾನದಿಂದ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ ಪಂಡಿತ ಪಂಚಾಕ್ಷರಿ ಗವಾಯಿಗಳವರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
RELATED ARTICLES