ಉಪ್ಪಿನಂಗಡಿ: ಇಲ್ಲಿನ ಯುವ ವೈದ್ಯ ಡಾ. ಗೌತಮ್ ರೈ ಭಾರತೀಯ ಸೇನೆಯ ವೈದ್ಯಾಧಿಕಾರಿ ಕಂ ಅಸಿಸ್ಟೆಂಟ್ ಕಮಾಂಡೆಂಟ್ ಆಗಿ ಸೇರ್ಪಡೆಗೊಂಡಿದ್ದಾರೆ. ಭಾರತೀಯ ಸೇನೆಯ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ವಿಭಾಗದಲ್ಲಿ ಡಾ. ರೈ ನೇಮಕಗೊಂಡಿದ್ದಾರೆ. ಖಾಸಗಿ ವೈದ್ಯರಾಗಿ ಕೈ ತುಂಬಾ ಸಂಪಾದಿಸುವ ಅವಕಾಶವಿದ್ದರೂ ಭಾರತೀಯ ಸೇನೆಯಲ್ಲಿ ವೈದ್ಯನಾಗಿ ದುಡಿಯಬೇಕೆಂಬ ಹಂಬಲದಿಂದ ಡಾ. ರೈ ಸೇನೆಗೆ ಸೇರ್ಪಡೆಗೊಂಡಿದ್ದಾರೆ.
ಉಪ್ಪಿನಂಗಡಿಯ ಶರತ್ ಕುಮಾರ್ ರೈ – ರುಕ್ಮಿಣಿ ರೈ ದಂಪತಿಯ ಪುತ್ರನಾಗಿರುವ ಗೌತಮ್ ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ 10ನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಇದೇ ವೇಳೆ ಸ್ಕೌಟ್ ನಲ್ಲಿ ರಾಷ್ಟ್ರಪತಿ ಪುರಸ್ಕಾರ್ ಪರೀಕ್ಷೆ ಉತ್ತೀರ್ಣರಾಗಿದ್ದರು. ಪಿಯುಸಿಯನ್ನು ಪುತ್ತೂರಿನ ಅಂಬಿಕಾ ವಿದ್ಯಾಲಯದಲ್ಲಿ ಪಡೆದು ವೈದ್ಯಕೀಯ ಶಿಕ್ಷಣವನ್ನು ಹೊಸಕೋಟೆಯ ಎಂಬಿಜೆ ಮೆಡಿಕಲ್ ಕಾಲೇಜಿನಲ್ಲಿ ಪಡೆದಿರುತ್ತಾರೆ.
ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂಬ ಕನಸಿನಿಂದ ಅರ್ಜಿಯನ್ನು ಸಲ್ಲಿಸಿದ್ದ ಅರ್ಜಿ ಪುರಸ್ಕೃತಗೊಂಡು ಆರು ತಿಂಗಳ ಸೈನಿಕ ತರಬೇತಿ ಯಶಸ್ವಿಯಾಗಿ ಪೂರ್ಣಗೊಳಿಸಿ, ಪಾಸಿಂಗ್ ಔಟ್ ತರಬೇತಿಯಲ್ಲಿ ಹೆತ್ತವರಿಂದ ಪದಕವನ್ನು ಪೋಣಿಸಿಕೊಂಡರು.