Monday, January 20, 2025
Homeಹುಬ್ಬಳ್ಳಿಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಕೇರಳ ರಾಜ್ಯ ಸಂಚಾಲಕರಾಗಿ ಕನ್ನಡ ಭವನದ ಡಾ. ವಾಮನ್ ರಾವ್...

ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಕೇರಳ ರಾಜ್ಯ ಸಂಚಾಲಕರಾಗಿ ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ಆಯ್ಕೆ.


ಹುಬ್ಬಳ್ಳಿ :ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆ ತಾಲೂಕುಗಳಲ್ಲಿ ತನ್ನ ಘಟಕವನ್ನು ಹೊಂದಿ, ಕನ್ನಡ ಸಾಹಿತ್ಯಾಭಿಮಾನ, ಭಾಷಾಭಿಮಾನ, ಬೆಳೆಸಿ, ಪುಸ್ತಕ ದಾಸೋಹ ಮೂಲಕ ಸುಮಾರು ಮೂರು ಲಕ್ಷ ಪುಸ್ತಕ ವಿತರಿಸಿ, ಇಡೀ ಕರ್ನಾಟಕ ರಾಜ್ಯದಲ್ಲಿ ತನ್ನದೇ ಆದ ಸ್ಥಾನ ಮಾನ, ಜನಮನ್ನಣೆ ಗಳಿಸುತ್ತಿರುವ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್, ಇದೀಗ ಕೇರಳ ರಾಜ್ಯದಲ್ಲಿ ತನ್ನ ಕನ್ನಡ ಪರ ಚಟುವಟಿಕೆಯನ್ನು ವಿಸ್ತರಿಸಲು ಮುಂದಾಗಿದೆ.
ಇದೇ ರೀತಿ ಮನೆಯನ್ನೇ ಕನ್ನಡ ಭವನವಾಗಿಸಿ, ಕನ್ನಡ ಭವನ ಗ್ರಂಥಾಲಯ, ಕನ್ನಡ ಭವನ ಸಾರ್ವಜನಿಕ ವಾಚನಾಲಯ, ವನ್ನಾಗಿಸಿ ನಿರಂತರ ಕನ್ನಡ ಪರ ಚಟುವಟಿಕೆಗಳಿಂದ ಕೇರಳ -ಕರ್ನಾಟಕ ರಾಜ್ಯಗಳಲ್ಲಿ ಮನೆ ಮಾತಾಗಿರುವ ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾಗಿರುವ ಡಾ. ವಾಮನ್ ರಾವ್ ಬೇಕಲ್ ಇವರನ್ನು ಕೇರಳ ರಾಜ್ಯ ಸಂಚಾಲಕರನ್ನಾಗಿ ನಿಯಮಿಸಲಾಗಿದೆ. ಇವರೀಗೆ ಕಾಸರಗೋಡು ಜಿಲ್ಲೆಯಲ್ಲಿ ಘಟಕವನ್ನು ಸ್ಥಾಪಿಸಿ ಸೂಕ್ತ ಅಧ್ಯಕ್ಷರನ್ನು ಆರಿಸಿ ತಿಳಿಸಲು ಸೂಚಿಸಲಾಗಿದೆ.ಕೇರಳ ರಾಜ್ಯದಲ್ಲಿ ಸಂಘ ಸಂಸ್ಥೆಗಲಿರುವ ಪ್ರದೇಶಗಳಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕೋರಿಕೊಳ್ಳಲಾಗಿದೆ.ಸಾಹಿತ್ಯ, ಕಲೆ, ಕನ್ನಡ ಸಂಸ್ಕೃತಿ, ನಾಡು -ನುಡಿ, ಪುಸ್ತಕ ಪ್ರೀತಿ, ಪುಸ್ತಕ ದಾಸೋಹ, ಕವಿಮನಸ್ಸು -ಸವಿಮನಸ್ಸು ಗಳನ್ನು ಪ್ರೊಸ್ತಾಹಿಸಿ ಸಂಸ್ಥೆಯನ್ನು ಜನಪ್ರಿಯಗೊಳಿಸಬೇಕೆಂದು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ, ಹುಬ್ಬಳ್ಳಿ ಸಂಸ್ಥಾಪಕ, ಸಂಚಾಲಕರಾದ, ಅಧ್ಯಕ್ಷರಾದ ಶ್ರೀ ಕೃಷ್ಣ ಮೂರ್ತಿ ಕುಲಕರ್ಣಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular