ಮೂಲ್ಕಿ ಐಕಳ ಕಂಬಳ ಜಾನಪದ ಹಾಗೂ ಧಾರ್ಮಿಕ ಐತಿಹ್ಯದ ಕಂಬಳ ಜೊತೆಗೆ ಗ್ರಾಮ ಹಬ್ಬವಾಗಿದೆ. ಎಸ್‌ಸಿಡಿಸಿಸಿ ಬ್ಯಾಂಕ್ ಮೂಲಕ ಉಭಯ ಜಿಲ್ಲೆಯಲ್ಲಿ ನಡೆಯುವ ಹೆಚ್ಚಿನ ಕಂಬಳಗಳಿಗೆ ಸಹಕಾರ ನೀಡಲಾಗುತ್ತಿದೆ ಎಂದು ಸಹಕಾರಿ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು. ಐಕಳದಲ್ಲಿ ಜರುಗಿದ ಐಕಳ ಬಾವ ಕಾಂತಾಬಾರೆ ಬೂದಾಬಾರೆ ಕಂಬಳದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಾರಾಷ್ಟ್ರ ಸರ್ಕಾರದ ಸಾರಿಗೆ ಸಚಿವ ಪ್ರತಾಪ್ ಜೀ ಬಾಬುರಾವ್ ಸರ್‌ನಾಯಕ್ ಮಾತನಾಡಿ, ಕರ್ನಾಟಕಕ್ಕೂ ಮುಂಬೈಗೂ ಹತ್ತಿರದ ಸಂಬಂಧವಿದೆ. ಮುಂಬೈಯಲ್ಲೂ ಕಂಬಳ ಮಾಡುವ ಬಗ್ಗೆ ನನಗೆ ಆಸಕ್ತಿ ಇದೆ. ಕಂಬಳದ ಬಗ್ಗೆ ಇಲ್ಲಿನ ಜನರು ತೋರಿಸುವ ಒಲವು ವಿಶೇಷವಾಗಿದೆ.
ಇದನ್ನು ನಾಡ ಹಬ್ಬವಾಗಿ ಆಚರಿಸುವಂತಾಗಬೇಕೆಂದು ಹೇಳಿದರು. ಸಮಸ್ತ ಕಂಬಳಾಭಿಮಾನಿಗಳ ಪರವಾಗಿ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಸಹಕಾರಿ ವೀರ ಬಿರುದು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ರಾಜ್ಯ ಸಾರಿಗೆ ಸಚಿವ ಪ್ರತಾಪ್‌ಜೀ ಬಾಬುರಾವ್ ಸರ್ ನಾಯಕ್, ಉದ್ಯಮಿ ಡಾ.ಕೆ. ಪ್ರಕಾಶ್ ಶೆಟ್ಟಿ, ಉದ್ಯಮಿ ಸದಾಶಿವ ಶೆಟ್ಟಿ ಕನ್ಯಾನ, ಮುಂಬೈ ಕುಶಾಲ್ ಭಂಡಾರಿ ಅವರನ್ನು ಸನ್ಮಾನಿಸಲಾಯಿತು. ಸಾಧಕ ಪ್ರೊ.ಗುಣಪಾಲ ಕಡಂಬ, ರಾಜೀವ ಶೆಟ್ಟಿ ಎಡ್ತೂರು, ಪತ್ರಕರ್ತೆ ಡಾ.ಮಮತಾ ಶೆಟ್ಟಿ, ನವೀನ್ ಚಂದ್ರ ಆಳ್ವ, ಸತೀಶ್ಚಂದ್ರ ಸಾಲ್ಯಾನ್, ಕದ್ರಿ ನವನೀತ ಶೆಟ್ಟಿ ಅವರನ್ನು ಗೌರವಿಸಲಾಯಿತು. ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಅದಾನಿ ಫೌಂಡೇಶನ್ ಅಧ್ಯಕ್ಷ ಕಿಶೋರ್ ಆಳ್ವ, ಕುಟುಂಬ ವೈದ್ಯ ಡಾ.ಟಿ. ರಮಾನಾಥ ಶೆಟ್ಟಿ, ಐಕಳ ಬಾವ ಕುಟುಂಬದ ಹಿರಿಯರಾದ ಶಾಂಭವಿ ಶಂಕರ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಐವನ್ ಡಿಸೋಜ, ಸಹಕಾರಿ ಮಾರಾಟ ಮಂಡಲ ನಿರ್ದೇಶಕ ಪುಟ್ಟಸ್ವಾಮಿ ಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಮಟ್ಟಾರು ರತ್ನಾಕರ ಹೆಗ್ಡೆ, ವಿನಯ ಕುಮಾರ್ ಸೂರಿಂಜೆ, ಜಯಕರ ಶೆಟ್ಟಿ ಇಂದ್ರಾಳಿ, ಶಶಿಕುಮಾರ್ ರೈ, ಸುಚರಿತ್ ಶೆಟ್ಟಿ, ಜಿಲ್ಲಾಧಿಕಾರಿ ರವಿಕುಮಾರ್, ಕುಶಲ ಭಂಡಾರಿ ಐಕಳ, ಪ್ರಕಾಶ್ ಶೆಟ್ಟಿ ಪಡುಹಿತ್ಲು, ಮುಂಬೈ ಸಮಿತಿಯ ಗಣನಾಥ ಶೆಟ್ಟಿ ಐಕಳಬಾವ, ವೇಣುಗೋಪಾಲ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸ್ವರಾಜ್ ಶೆಟ್ಟಿ ಮತ್ತಿತರರು ಇದ್ದರು. ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಐಕಳ ಬಾವ ಸ್ವಾಗತಿಸಿದರು. ಸಾಯಿನಾಥ ಶೆಟ್ಟಿ ಮತ್ತು ಶ್ರೀಶ ಸರಾಪ್ ಐಕಳ ನಿರೂಪಿಸಿದರು. ಚಿತ್ತರಂಜನ್ ಭಂಡಾರಿ ವಂದಿಸಿದರು.