ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ಮಣ್ ಇಲ್ಲಿನ ವಾರ್ಷಿಕೋತ್ಸವ ದಿನದಂದು ಡಾ. ಮಾಲತಿ ಪೈ ಇವರು ಬರೆದಿರುವ “ಯೋಗದೊಂದಿಗೆ ಅರಿವಿನ ಹೊನಲು ಶಕ್ತಿಶಾಲಿ ಮೆದುಳು” ಎನ್ನುವ ಪುಸ್ತಕವನ್ನು ಬಿಡುಗಡೆ ಕಾರ್ಯಕ್ರಮ ನೆರವೇರಿಸಿದ್ದು ಈ ಕಾರ್ಯಕ್ರಮದಲ್ಲಿ ಡಾ. ಬೋಳ ವಿಠ್ಠಲ್ ಶೆಟ್ಟಿ ಟ್ರಸ್ಟಿನ ಸಂಚಾಲಕರಾಗಿರುವ ಮುಂಬೈಯ ಪ್ರಸಿದ್ಧ ವಕೀಲರಾದ ಸುನಿಲ್ ಶೆಟ್ಟಿ ಇವರಿಂದ ಪುಸ್ತಕ ಬಿಡುಗಡೆ ಕಾರ್ಯಕ್ರಮ ನೆರವೇರಿದ್ದು ಹಾಗೂ ಉತ್ತಮ ಎಸ್‌ಡಿಎಂಸಿ ಯ ಅಧ್ಯಕ್ಷರೆಂದು ಜನಜನತರಾಗಿರುವ ವಿಶ್ವನಾಥ್ ಪ್ರಭು ಇವರಿಗೆ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಲಾಯಿತು ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಕ್ಷರಾಗಿರುವ ಸೂರ್ಯಕಾಂತ್ ಶೆಟ್ಟಿ, ಬಾಲಚಂದ್ರ ಶೆಟ್ಟಿ, ರೇಷ್ಮಾ ಉದಯ್ ಕುಮಾರ್, ಆಶಾ ದೇವೇಂದ್ರ ಶೆಟ್ಟಿ , ತುಕಾರಾಂ ಶೆಟ್ಟಿ ಮುರಳಿಧರ ಜೋಗಿ ಸರ್ವಜ್ಞ ತಂತ್ರಿ ನ್ಯಾಯವಾದಿಗಳು ಜನಾರ್ಧನ್ ಭಟ್, ಸುಕುಮಾರ್ ಶೆಟ್ಟಿ ಪೆರಾಡಿ ಹಾಗೂ ಕಾಲೇಜಿನ ಪ್ರಾಂಶುಪಾಲರಾಗಿರುವ ವಸಂತ ಆಚಾರ್ ಹಾಗೂ ಶಾಲಾ ಮುಖ್ಯಸ್ಥರಾಗಿರುವ ಗೋಪಾಲ್ ಇವರಿಂದ ಹಾಗೂ ಸಂಸ್ಥೆಯ ಎಲ್ಲಾ ಉಪನ್ಯಾಸಕ ಅಧ್ಯಾಪಕ ವರ್ಗದವರು ಬೋಧಕೇತರ ವರ್ಗ ಪೋಷಕಾಭಿಮಾನಿಗಳು ವಿದ್ಯಾ ಅಭಿಮಾನಿಗಳ, ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸಂಸ್ಥೆಯ ವಾರ್ಷಿಕೋತ್ಸವ ದಿನಾಚರಣೆಯನ್ನು ಅಭೂ ತಪೂರ್ವಕವಾಗಿ ನೆರವೇರಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಜಯಂತಿ ಶೆಟ್ಟಿ ಹಾಗೂ ಆರತಿ ಇವರು ಕಾರ್ಯಕ್ರಮಕ್ಕೆ ಧನ್ಯವಾದ ಅರ್ಪಿಸಿದರು.