ಮುಲ್ಕಿ: ರಾಷ್ಟ್ರ ಕಂಡ ಅಪರೂಪದ ವ್ಯಕ್ತಿ ಡಾ. ಮನಮೋಹನ್ ಸಿಂಗ್. ಇವರ ನಿಧನವು ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಇವರ ದೂರ ದೃಷ್ಟಿತ್ವ ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೋಹನ್ ಕೋಟ್ಯಾನ್ ನುಡಿದಿದ್ದಾರೆ.
ಅವರು ಮುಲ್ಕಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ದಿವಂಗತ ಮನಮೋಹನ್ ಸಿಂಗ್ ರವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯರಾದ ಎಚ್ ವಸಂತ ಬರ್ನಾಡ್ ನುಡಿ ನಮನಗಳು ಗೈದರು.
ಕಾರ್ಯಕ್ರಮದಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಪದ್ಮಾವತಿ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ, ಕಾಂಗ್ರೆಸ್ ನಾಯಕರುಗಳಾದ ಮಂಜುನಾಥ ಕಂಬಾರ, ಆಲ್ವಿನ್ ಡಿಕುನ್ನ, ಸುಬ್ರಮಣ್ಯ ಭಟ್, ಧರ್ಮಾನಂದ ಶೆಟ್ಟಿಗಾರ, ಜನಾರ್ದನ ಬಂಗೇರ, ಮಹಾಬಲ ಸನಿಲ್, ಯೋಗೀಶ್ ಕೋಟ್ಯಾನ್, ನಿರಂಜಲನೀತು, ನೆಲ್ಸನ್ ಲೋಬೋ, ಪ್ರಕಾಶ್ ಆಚಾರ್ಯ, ಜಲಜ ಪಾಣರ, ಅದು ಅಂಗರಗುಡ್ಡೆ, ಅಶ್ವಿನಿ ಆಳ್ವ, ಅಬ್ದುಲ್ ಖಾದರ್, ಚಂದ್ರಶೇಖರ ಕಿನ್ನಿಗೋಳಿ, ರಿಚರ್ಡ್, ಬಶೀರ್ ಕುಳಾಯಿ, ಮನೀಶ್ ಪೂಜಾರಿ ಮೊದಲಾದವರಿದ್ದರು.