ದಕ್ಷಿಣ ಕನ್ನಡ ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಠರಾಗಿರುವ ಡಾ ಮುರಲೀ ಮೋಹನ ಚೂಂತಾರುರವರು ದಿನಾಂಕ 11-12-2024 ರ ಬುಧವಾರ ಮೂಲ್ಕಿ ಘಟಕಕ್ಕೆ ಭೇಟಿ ನೀಡಿದರು •ಈ ಸಂದರ್ಭದಲ್ಲಿಅವರು ಕಳೆದ ಹತ್ತು ವರ್ಷಗಳಿಂದ ಅವಧಿಯಲ್ಲಿ ಸಮಾದೇಷ್ಟರಾಗಿ ಕರ್ತವ್ಯ ನಿರ್ವಹಿಸಿ ಈಗ ನಿರ್ಗಮಿಸುತ್ತಿರುವ ಸಮಯದಲ್ಲಿ ಇಷ್ಟು ವರ್ಷ ಸಹಕಾರ ನೀಡಿದ ಎಲ್ಲಾ ಸಿಬ್ಬಂದಿಗಳಿಗೆ ಕೃತಜ್ಞತೆ ಗಳನ್ನು ತಿಳಿಸಿದರು. ಮುಂದಿನ ದಿನಗಳಲ್ಲಿ ಒಳ್ಳೆಯ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಮಾದರಿ ಯಾಗಿ ಇರಬೇಕು ಎಂದು ತಿಳಿಸಿ ಸಿಬ್ಬಂದಿಗಳ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಿದರು. ಈ ವೇಳೆ ಹಿರಿಯ ಸಿಬ್ಬಂದಿ ಅಶ್ರಫ್ ಹುಸೈನ್ ರವರನ್ನು ಸನ್ಮಾನಿಸಿ ಗೌರವಿಸಿದರು. ಮೂಲ್ಕಿ ಘಟಕದ ವತಿಯಿಂದ ಸಮಾದೇಷ್ಠ ರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭ ಇನ್ಸ್ ಪೆಕ್ಟರ್ ಕಿಶೋರ್ ರವರು, ಪ್ರಭಾರ ಘಟಕಾಧಿಕಾರಿ ಲೋಕೇಶ್, ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಮೂಲ್ಕಿ ಘಟಕದ ಪ್ರಭಾರ ಘಟಕಾಧಿಕಾರಿ ಲೋಕೇಶ್ ಕಾರ್ಯಕ್ರಮ ನಿರ್ವಹಿಸಿದರು ಹಿರಿಯ ಗೃಹರಕ್ಷಕಿ ಕಮಲ ಧನ್ಯವಾದಗಳನ್ನು ಅರ್ಪಿಸಿದರು.