ಡಾ.ಫ.ಗು.ಹಳಕಟ್ಟಿಯವರ ಜಯಂತಿ ಮತ್ತು ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ    

0
57

  ದಾವಣಗೆರೆ :- ನಗರದ ಶ್ರೀ ಗುರು ಬಸವ ಮಂಟಪದಲ್ಲಿ ಡಾ.ಫ.ಗು. ಹಳಕಟ್ಟಿಯವರ ಜಯಂತಿ, ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 02-07-2024ರ ಮಂಗಳವಾರ ಬೆಳಗ್ಗೆ 11 ಗಂಟೆಗೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶರಣೆ ಗಾಯತ್ರಿ ವಸ್ತ್ರದ್ ಅಧ್ಯಕ್ಷರು ಜಿಲ್ಲಾ ಕದಳಿ ಮಹಿಳಾ ವೇದಿಕೆ ದಾವಣಗೆರೆ ಮಾಡಲಿದ್ದಾರೆ ಮತ್ತು ಅಧ್ಯಕ್ಷತೆಯನ್ನು ಶರಣ ಕೆ ಬಿ ಪರಮೇಶ್ವರಪ್ಪ ಅಧ್ಯಕ್ಷರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ಇವರ ವಹಿಸಲಿದ್ದಾರೆ.” ವಚನ ಸಂಸ್ಕೃತಿ ಮತ್ತು ಬದುಕು “ಎನ್ನುವ ವಿಷಯ ಕುರಿತು ಶರಣ ಮಂಜುನಾಥ್ ಕುರ್ಕಿ ನಿಕಟಪೂರ್ವ ಅಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ದಾವಣಗೆರೆ ಇವರು ಅನುಭಾವ ನೀಡಲಿದ್ದಾರೆ. ಎಲ್ಲಾ ಶರಣು ಬಂದುಗಳು ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣ ಕೆ ಬಿ ಪರಮೇಶ್ವರಪ್ಪ ಅವರು ಕೋರಿದ್ದಾರೆ.

LEAVE A REPLY

Please enter your comment!
Please enter your name here