Sunday, July 21, 2024
Homeಮಂಗಳೂರುಮಂಗಳೂರು ವಿಶ್ವವಿದ್ಯಾನಿಲಯದ 10ನೇ ಕುಲಪತಿಯಾಗಿ ಡಾ.ಪಿ.ಎಲ್.ಧರ್ಮ ಅಧಿಕಾರ ಸ್ವೀಕಾರ

ಮಂಗಳೂರು ವಿಶ್ವವಿದ್ಯಾನಿಲಯದ 10ನೇ ಕುಲಪತಿಯಾಗಿ ಡಾ.ಪಿ.ಎಲ್.ಧರ್ಮ ಅಧಿಕಾರ ಸ್ವೀಕಾರ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆಗೆ ಮಂಗಳೂರು ವಿವಿಯ ಮಾಜಿ ಪರೀಕ್ಷಾಂಗ ಕುಲಸಚಿವ, ರಾಜ್ಯ ಶಾಸ್ತ್ರ, ಉಪನ್ಯಾಸಕ ಪ್ರೊ.ಪಿ.ಎಲ್.ಧರ್ಮ ಅವರನ್ನು ನೇಮಕಗೊಳಿಸಿ ಮಾ.5ರಂದು ರಾಜ್ಯಪಾಲರು ಆದೇಶ ನೀಡಿದ್ದಾರೆ.

ನೂತನ ಕುಲಪತಿ ಪ್ರೊ. ಪಿ.ಎಲ್.ಧರ್ಮ ಅವರು ಮಾ.5ರಂದು ವಿವಿ ಪ್ರಭಾರ ಕುಲಪತಿ ಪ್ರೊ. ಜಯರಾಜ್ ಅಮೀನ್ ಅವರಿಂದ ಅಧಿಕಾರ ಸ್ವೀಕರಿಸಿದರು. 4 ವರ್ಷಗಳಿಂದ ಮಂಗಳೂರು ವಿ.ವಿ. ಕುಲಪತಿಯಾಗಿದ್ದ ಪ್ರೊ.ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಕಳೆದ ವರ್ಷ ಜೂ.2ರಂದು ಸೇವಾ ನಿವೃತ್ತಿಯಾಗಿದ್ದರು. ಆ ಬಳಿಕ ಕುಲಪತಿ ಹುದ್ದೆ ಖಾಲಿ ಇತ್ತು. ಜೂ.2ರಂದು “ಪ್ರಭಾರ ಕುಲಪತಿ”ಯಾಗಿ ಮಂಗಳೂರು ವಿ.ವಿ. ರಾಜ್ಯ ಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗೂ ಡೀನ್ ಪ್ರೊ. ಜಯರಾಜ್ ಅಮೀನ್ ಅವರು ಅಧಿಕಾರದಲ್ಲಿದ್ದರು.

RELATED ARTICLES
- Advertisment -
Google search engine

Most Popular