Tuesday, April 22, 2025
Homeಬಂಟ್ವಾಳಕಲ್ಲಡ್ಕ ಪೇಟೆಯಲ್ಲಿ ಮಾನಸಿಕ ಅಸ್ವಸ್ಥನ ಸೇವೆಗೆ ಡಾಕ್ಟರ್ ರಾಜೇಶ್ ಮತ್ತು ಸ್ಥಳೀಯರ ಸಹಕಾರ

ಕಲ್ಲಡ್ಕ ಪೇಟೆಯಲ್ಲಿ ಮಾನಸಿಕ ಅಸ್ವಸ್ಥನ ಸೇವೆಗೆ ಡಾಕ್ಟರ್ ರಾಜೇಶ್ ಮತ್ತು ಸ್ಥಳೀಯರ ಸಹಕಾರ

ಬಂಟ್ವಾಳ : ಕಲ್ಲಡ್ಕ ಪೇಟೆಯ ಆಸುಪಾಸಿನಲ್ಲಿ ಕೆಲವು ಸಮಯಗಳಿಂದ ಮಾನಸಿಕ ಅಸ್ವಸ್ಥನಂತೆ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಡಾಕ್ಟರ್ ಚಂದ್ರಶೇಖರ್ ರವರ ಕಲ್ಲಡ್ಕ ಚೇತನಾ ಕ್ಲಿನಿಕ್ ಇಲ್ಲಿಯ ಮನೋರೋಗ ತಜ್ಞರಾದ ಡಾ. ರಾಜೇಶ್ ಇವರು ಮನೋರೋಗಿಯಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಸೂಕ್ತವಾಗಿ ಉಪಚಾರಿಸಿದರೆ ಉತ್ತಮ ವ್ಯಕ್ತಿಯಾಗಿ ರೂಪಿಸಬಹುದು ಎಂಬ ಕಲ್ಪನೆಯಂತೆ ಸ್ವತಹ ವ್ಯಕ್ತಿಯಲ್ಲಿ ವಿಚಾರಿಸಿ ತಮಿಳುನಾಡು ಕಾಂಚಿ ಪುರಂ ವ್ಯಕ್ತಿ ಎಂದು ತಿಳಿದು ಧೈಗೊಳಿ ಸತ್ಯಸಾಯಿ ಸೇವಾಶ್ರಮಕ್ಕೆ ಮಾಹಿತಿಯನ್ನು ನೀಡಿ.

ಅವರ ಮೂಲಕ ಮೂಲಕ ಮಾನಸಿಕ ಅಸ್ವಸ್ಥನಂತೆ ತಿರುಗಾಡುತ್ತಿದ್ದ ಈ ವ್ಯಕ್ತಿಯನ್ನು ಸ್ಥಳಿಯರಾದ ಚೇತನ ಕ್ಲಿನಿಕ್ ಸಿಬ್ಬಂದಿ ವಿನಯಾ ಮಿತಬೈಲು , ಜಮಾಲ್ ಕರಾವಳಿ ಮೆಡಿಕಲ್, ಸೌಕತ್ ಕಲ್ಲಡ್ಕ,ಅರಿಶ್ ಅಮರ್ ,ಕಲ್ಲಡ್ಕ ಶೌರ್ಯ ತಂಡದ ಸದಸ್ಯರಾದ ಸಂತೋಷ್ ಹಾಗೂ ಇನ್ನಿತರ ಸಹಕಾರದೊಂದಿಗೆ ಆತನಿಗೆ ಪ್ರಥಮ ಚಿಕಿತ್ಸೆಯನ್ನು ನೀಡಿ ಆಂಬುಲೆನ್ಸ್ ನಲ್ಲಿ ಸೇವಾ ಶ್ರಮಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದರು.
ಅಲ್ಲಿ ಆತನಿಗೆ ಚಿಕಿತ್ಸೆಯನ್ನು ನೀಡಿ ಸಾಮಾನ್ಯ ವ್ಯಕ್ತಿಯಂತೆ ರೂಪಿಸಿ ನಂತರ ಸಂಬಂಧ ಪಟ್ಟ ಇಲಾಖೆಗಳಿಗೆ ತಿಳಿಸಿ ,ಆತನ ಮನೆಯವರನ್ನು ಸಂಪರ್ಕಿಸುವುದರ ಮೂಲಕ ಆತನ ಮನೆಗೆ ಸೇರಿಸಿ ಹೊಸ ಜೀವನಕ್ಕೆ ನಾಂದಿಯಾಗಲಿದ್ದಾರೆ. ಇವರ ಈ ಕಾರ್ಯಕ್ಕೆ ಎಲ್ಲರಿಂದಲೂ ಪ್ರಸಂಶೆ ವ್ಯಕ್ತವಾಗಿದೆ.

RELATED ARTICLES
- Advertisment -
Google search engine

Most Popular