Sunday, July 14, 2024
Homeರಾಜ್ಯಫ್ರಾನ್ಸ್ ಸೆನೆಟ್‌ನಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರಿಗೆ 'ಭಾರತ...

ಫ್ರಾನ್ಸ್ ಸೆನೆಟ್‌ನಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರಿಗೆ ‘ಭಾರತ ಗೌರವ ಪ್ರಶಸ್ತಿ’ ನೀಡಿ ಸನ್ಮಾನ

ಶ್ರೀಸತ್ ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಂದ ಪ್ರಶಸ್ತಿ ಸ್ವೀಕಾರ

ಪ್ಯಾರಿಸ್ (ಫ್ರಾನ್ಸ್) : ಇಡೀ ಮನುಕುಲದ ಕಲ್ಯಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ, ಸಾಧನೆಗಾಗಿ ಮಾರ್ಗದರ್ಶನ ಮಾಡುತ್ತಾ ಜಗತ್ತಿನಾದ್ಯಂತ ಸಾಧಕರ ಜೀವನವನ್ನು ಆನಂದಮಯವನ್ನಾಗಿಸಿದ, ವಿಜ್ಞಾನಯುಗದಲ್ಲಿ ಅಧ್ಯಾತ್ಮಪ್ರಸಾರವನ್ನು ಸುಲಭ ಭಾಷೆಯಲ್ಲಿ ಮಾಡಿ ಸಮಾಜಕ್ಕೆ ಮಾರ್ಗದರ್ಶನ ಮಾಡುವ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರಿಗೆ 5 ಜೂನ್ 2024 ರಂದು ಫ್ರಾನ್ಸ್ ಸೆನೆಟ್ (ಸಂಸತ್ತು) ನಲ್ಲಿ ‘ಭಾರತ ಗೌರವ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಫ್ರೆಂಚ್ ಸಂಸತ್ತಿನ ಉಪಾಧ್ಯಕ್ಷ ಡೊಮಿನಿಕ್ ಥಿಯೋಫಿಲ್, ಮೆಹೆಂದಿಪುರ ಬಾಲಾಜಿ ಟ್ರಸ್ಟ್ ನ ಶ್ರೀ ನರೇಶ ಪುರಿ ಮಹಾರಾಜ್, ‘ಸಂಸ್ಕೃತಿ ಯುವಾ ಸಂಸ್ಥೆ’ಯ ಅಧ್ಯಕ್ಷ ಪಂ. ಸುರೇಶ ಮಿಶ್ರಾ ಹಾಗೂ ಫ್ರೆಂಚ್ ಸಂಸತ್ತಿನ ಸದಸ್ಯರಾದ ಫ್ರೆಡೆರಿಕ್ ಬೌವೆಲ್ ಇವರ ಹಸ್ತದಿಂದ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಜಾಗತಿಕ ಪ್ರಸಾರಕ್ಕಾಗಿ ನೀಡಿದ ಅನನ್ಯ ಕೊಡುಗೆಗಾಗಿ ಅವರಿಗೆ ಈ ಪ್ರಶಸ್ತಿಯನ್ನು ನೀಡಿದರು. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಪರವಾಗಿ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್ ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. “ಸಂಸ್ಕೃತಿ ಯುವಾ ಸಂಸ್ಥೆ” ಈ ಪ್ರಶಸ್ತಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರನ್ನು ಆರಿಸಿತ್ತು.

ಈ ಸಂದರ್ಭದಲ್ಲಿ ‘ಸಂಸ್ಕೃತಿ ಯುವಾ ಸಂಸ್ಥೆ’ಯ ಅಧ್ಯಕ್ಷ ಪಂಡಿತ್ ಸುರೇಶ್ ಮಿಶ್ರಾ ಮಾತನಾಡಿ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ಭಾರತೀಯ ಸಂಸ್ಕೃತಿಗೆ ನೀಡಿದ ಕೊಡುಗೆ ಅನನ್ಯವಾಗಿದೆ. ಅವರ ನೇತೃತ್ವದಲ್ಲಿ ಸನಾತನ ಸಂಸ್ಥೆಯು ಅನೇಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಜಾಗೃತಿ ಮತ್ತು ಸಕಾರಾತ್ಮಕ ಬದಲಾವಣೆಯನ್ನು ತಂದಿದೆ ಎಂದು ಹೇಳಿದರು.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರು ಅಖಿಲ ಮನುಕುಲದ ಕಲ್ಯಾಣಕ್ಕಾಗಿ ಮಾಡಿದ ದಿವ್ಯ ಕಾರ್ಯಕ್ಕಾಗಿ ಅವರಿಗೆ ಗೌರವ

ಈ ಪ್ರಶಸ್ತಿಯನ್ನು ಸ್ವೀಕರಿಸಿದ ಶ್ರೀಸತ್ ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಅವರು ಮಾತನಾಡಿ, ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರಿಗೆ ಫ್ರಾನ್ಸ್ ಸಂಸತ್ತಿನಲ್ಲಿ ‘ಭಾರತ ಗೌರವ ಪ್ರಶಸ್ತಿ’ಯಿಂದ ಗೌರವಿಸಿದ್ದಕ್ಕೆ ಸನಾತನ ಸಂಸ್ಥೆಯಿಂದ ‘ಸಂಸ್ಕೃತಿ ಯುವಾ ಸಂಸ್ಥೆ’ ಮತ್ತು ಸಂಸ್ಥೆಯ ಅಧ್ಯಕ್ಷ ಪಂ. ಸುರೇಶ್ ಮಿಶ್ರಾ ಅವರಿಗೆ ಕೃತಜ್ಞತೆ ವ್ಯಕ್ತಪಡಿಸುತ್ತೇವೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಉಚ್ಛ ಮಟ್ಟದ ಸಂತರಾಗಿದ್ದು ಈ ಪ್ರಶಸ್ತಿಗಳು ಮತ್ತು ಗೌರವಗಳ ಆಚೆಗೆ ತಲುಪಿದ್ದರೂ, ಅವರಿಗೆ ಸಂದ ಗೌರವವು ಸಂಪೂರ್ಣ ಮನುಕುಲದ ಕಲ್ಯಾಣಕ್ಕಾಗಿ ಅವರು ನೀಡಿದ ದಿವ್ಯ ಆಧ್ಯಾತ್ಮಿಕ ಕಾರ್ಯದ ಗೌರವವಾಗಿದೆ. ಈ ಗೌರವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ಅಧ್ಯಾತ್ಮ ಶಾಸ್ತ್ರದ ಬಗ್ಗೆ ಮಾಡಿದ ಅಸಾಧಾರಣ ಸಂಶೋಧನಾ ಕಾರ್ಯ ಮತ್ತು ಗ್ರಂಥ ಲೇಖನ ಹಾಗೆಯೇ ಅಖಿಲ ಮನುಕುಲದ ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ನೀಡಿದ ‘ಗುರುಕೃಪಾಯೋಗ’ ಈ ಸಾಧನಾಮಾರ್ಗ ಇವುಗಳಿಗೇ ಸಲ್ಲುತ್ತದೆ ಎಂದು ನಾವು ತಿಳಿಯುತ್ತೇವೆ.’ ಎಂದರು.

RELATED ARTICLES
- Advertisment -
Google search engine

Most Popular