ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರು, ಮಾಜಿ ಮಂತ್ರಿಗಳು, ಹಾಲಿ ಶಾಸಕರಾದ ಕೊಡುಗೈ ದಾನಿಗಳಾದ ಡಾ|| ಶಾಮನೂರು ಶಿವಶಂಕರಪ್ಪನವರು ಅನಾರೋಗ್ಯದ ಪ್ರಯುಕ್ತ ಬೆಂಗಳೂರಿನ ಸದಾಶಿವ ನಗರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರಿಂದ ಕೆ.ಟಿ.ಜೆ.ನಗರದ ಗಾಂಧೀಜಿ ಹರಿಜನ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ, ಕೆ.ಪಿ.ಸಿ.ಸಿ. ಎಸ್ಸಿ ವಿಭಾಗದ ಕಾರ್ಯದರ್ಶಿ ಸೋಮಲಾಪುರ ಹನುಮಂತಪ್ಪ ಮತ್ತು ದಾವಣಗೆರೆ ವೀರಶೈವ ಮುಖಂಡರಾದ ಮಂಜುನಾಥ ಕಲಘಟಗಿ ಹಾಗೂ ಓರಿಯಂಟೆಲ್ ಇನ್ಸುರೆನ್ಸ್ ನಿವೃತ್ತ ಅಧಿಕಾರಿಯಾದ ಜಿ.ಗುಡ್ಡಪ್ಪ ಕಂಟೆಪ್ಪನವರ್ ಶಾಮನೂರು ಶಿವಶಂಕರಪ್ಪನವರು ಶೀಘ್ರವಾಗಿ ಸುಗಣಮುಖರಾಗಿ ಜನಸೇವೆ ಮಾಡಲು ದೇವರು ತಮಗೆ ಆಶೀರ್ವದಿಸಲಿ ಎಂದು ಹಾರೈಸಿದರು.