ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿ ಸಂಘದ ಕಾರ್ಯ ಶ್ಲಾಘನೀಯ – ಡಾ. ಸುರೇಶ್
ತೇಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾಗಿದ ಡಾ. ಸುರೇಸ್ ರೈ ಅವರು ಮೂವತ್ತೆರಡು ವರ್ಷಗಳಿಗಿಂತಲೂ ಹೆಚ್ಚಿನ ಶಿಕ್ಷಣ ಅನುಭವವನ್ನು ಹೊಂದಿರುವ ಡಾ. ರೈ ಅವರು ಅಪಾರ ಜ್ಞಾನ ಮತ್ತು ಪರಿಣತಿಯನ್ನು ತಮ್ಮೊಂದಿಗೆ ತಂದುಕೊಟ್ಟಿದ್ದಾರೆ. ಅವರು ಖ್ಯಾತ ಶಿಕ್ಷಣ ತಜ್ಞರು ಮತ್ತು ದಕ್ಷ ಆಡಳಿತಗಾರ.
ಇವರು ನೂತನವಾಗಿ ಎಂಪಿಎಂ ಕಾಲೇಜಿನ ಪ್ರಾಚಾರ್ಯರಾಗಿ ನ 06 ರಂದು ಎಲ್ಲಾ ಸಿಬ್ಬಂದಿಯ ಸಮ್ಮುಖದಲ್ಲಿ ತಮ್ಮ ಅಧಿಕಾರವನ್ನು ಸ್ವೀಕರಿಸಿದರು.
ಇವರಿಗೆ ಎಂಪಿಎಂ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ರಾಜೇಶ್ ಆಚಾರ್ಯ ಹೂ ಗುಚ್ಛ ನೀಡಿ ಸ್ವಾಗತಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ರೈ ಅವರು ಈ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದವರು ಎಲ್ಲಾ ರೀತಿಯ ಕಾರ್ಯ ಚಟುವಟಿಕೆಯಲ್ಲಿ ಕಾಲೇಜಿನ ಒಂದು ಭಾಗವಾಗಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ ಮುಂದೆಯು ಸಹ ಇದೇ ರೀತಿ ಕಾಲೇಜಿನ ಕಾರ್ಯದಲ್ಲಿ ತೋಡಗಿಕೊಳ್ಳಿ ನಮ್ಮಸಹಕಾರ ನಿಮ್ಮೊಂದಿಗೆ ಎಂದು ಇದೇ ಎಂದು ಹೇಳಿದರು ಈ ಸಂದರ್ಭದಲ್ಲಿ ಜೊತೆ ಕಾರ್ಯದರ್ಶಿ ಅಕ್ಷತಾ ರಾವ್ , ಮಂಜು ಶೆಟ್ಟಿ ಸಾಣೂರು ಉಪಸ್ಥಿತರಿದ್ದರು.