ಪಠ್ಯ ಆಧಾರಿತ – ನಾಟಕ ಪ್ರದರ್ಶನ
ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಸಾಹಿತ್ಯ ಸಂಘ ಹಾಗೂ ಆಂಗ್ಲ ಭಾಷಾ ವಿಭಾಗದ ವತಿಯಿಂದ
ಆರ್.ಕೆ ನಾರಾಯಣ್‌ಅವರ ಕಥೆ ಆಧಾರಿತ ʼದ ವಾಚ್ ಮ್ಯಾನ್ ಆಫ್ ದ ಲೇಕ್ʼ ಎಂಬ ನಾಟಕವನ್ನು
ಪ್ರದರ್ಶಿಸಲಾಯಿತು. ಆಂಗ್ಲ ಭಾಷಾ ವಿಭಾಗದ ಉಪನ್ಯಾಸಕಿ ಶ್ರೀದೇವಿ ಎಮ್ ನಾಟಕವನ್ನು
ನಿರ್ದೇಶಿಸಿದರು. ವಿದ್ಯಾರ್ಥಿಗಳಾದ ಬಿಂದು ಕೆ.ಜೆ , ವರ್ಷ, ಗೀತಾಂಜಲಿ ಕೆ.ಎನ್, ನಂದಿತ, ಶಿಲ್ಪಶ್ರೀ,
ಚಂದನ್ ಪಿ, ಚಿನ್ಮಯ್‌ಎಸ್, ಶೋಭಿತಾ ಸಿ.ಎಚ್, ರಕ್ಷ, ಪ್ರಥ್ವಿ, ಸಮೀಕ್ಷಾ ಎಚ್. ಎಮ್, ಆಕಾಶ್ ರೈ,
ತೇಜಸ್, ಮೈತ್ರೇಯಿ ಹಾಗೂ ಅನ್ವಿತಾ ನಾಟಕದಲ್ಲಿ ಅಭಿನಯಿಸಿದರು. ವಿದ್ಯಾರ್ಥಿನಿ ಬಿಂದು ಕೆ.ಜೆ
ಸ್ವಾಗತಿಸಿ, ಸಾಹಿತ್ಯ ಸಂಘದ ಸಂಯೋಜಕರಾದ ವಿದ್ಯಾಪಾರ್ವತಿ ಪಿ ವಂದಿಸಿದರು. ಈ ಸಂದರ್ಭದಲ್ಲಿ
ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನ
RELATED ARTICLES