Saturday, July 20, 2024
Homeಉಡುಪಿವಿಪರೀತ ಮದ್ಯಪಾನದ ಚಟವಿದ್ದ ಅಪ್ರಾಪ್ತ ವಯಸ್ಕ ಕುಸಿದು ಬಿದ್ದು ಸಾವು

ವಿಪರೀತ ಮದ್ಯಪಾನದ ಚಟವಿದ್ದ ಅಪ್ರಾಪ್ತ ವಯಸ್ಕ ಕುಸಿದು ಬಿದ್ದು ಸಾವು

ಹಿರಿಯಡ್ಕ: ವಿಪರೀತ ಮದ್ಯಪಾನದ ಚಟ ಹೊಂದಿದ್ದ ಅಪ್ರಾಪ್ತ ವಯಸ್ಕ ಹುಡುಗನೊಬ್ಬ ಬಾತ್‌ರೂಂನಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಇಲ್ಲಿನ ಅಂಜಾರು ಗ್ರಾಮದ ಪ್ರೇಮಾ ಎಂಬವರ 17 ವರ್ಷದ ಮಗ ಸಾವನ್ನಪ್ಪಿದ್ದಾನೆ.
ಮನೆಯಲ್ಲೇ ಕೆಲಸ ಮಾಡಿಕೊಂಡಿದ್ದ ಈತ ವಿಪರೀತ ಮದ್ಯಪಾನ ಮಾಡುತ್ತಿದ್ದನು ಎನ್ನಲಾಗಿದೆ. ಬುದ್ಧಿಮಾತು ಹೇಳಿದರೂ ಕೇಳದೆ ಮದ್ಯಪಾನ ಮಾಡುತ್ತಿದ್ದ ಬಾಲಕ, ಬುಧವಾರ ರಾತ್ರಿ ಮೂತ್ರ ಮಾಡಲೆಂದು ಬಾತ್‌ರೂಂಗೆ ಹೋಗಿದ್ದಾಗ ಕುಸಿದು ಬಿದ್ದಿದ್ದನೆನ್ನಲಾಗಿದೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ತಿಳಿದುಬಂದಿದೆ. ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular