Thursday, July 25, 2024
Homeಉಡುಪಿಮೂರು ಸಾವಿರ ಎಕರೆ ಯಾಂತ್ರಿಕೃತ ಭತ್ತ ಬೇಸಾಯಕ್ಕೆ ಚಾಲನೆ

ಮೂರು ಸಾವಿರ ಎಕರೆ ಯಾಂತ್ರಿಕೃತ ಭತ್ತ ಬೇಸಾಯಕ್ಕೆ ಚಾಲನೆ

ಬೈಂದೂರು : ಮಯ್ಯಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ, ಸಿ ಟ್ರಸ್ಟ್ (ರಿ) ಬೈಂದೂರು, ನಾಟಿ ಯಂತ್ರ ಬ್ಯಾಂಕ್ ಬೈಂದೂರು ಹಾಗೂ ಶ್ರೀ ಮುಕಾಂಭಿಕಾ ಭತ್ತ ಬೆಳೆಗರಾರ ಒಕ್ಕೂಟ ಬೈಂದೂರು ಇವರ ಸಹಯೋಗದಲ್ಲಿ ಮಯ್ಯಾಡಿ, ಕಳವಡಿ ವೆಂಕಟ ಪೂಜಾರಿ ಯವರ ಗದ್ದೆಯಲ್ಲಿ ಯಾಂತ್ರಿಕ್ರತ ಭತ್ತ ಬೇಸಾಯ ಯಂತ್ರಶ್ರೀ ನಾಟಿಗೆ ಉತ್ತರ ಕನ್ನಡ ಜಿಲ್ಲೆಯ ನಿರ್ದೇಶಕರು ಮಹೇಶ್ ಎಂ ಡಿ ರವರು ಚಾಲನೆ ನೀಡಿ ಮಾತನಾಡಿದರು
ಹೆಚ್ಚುತ್ತಿರುವ ಭತ್ತ ಕೃಷಿ ವೆಚ್ಚ, ಕೂಲಿಕಾರರ ಕೊರತೆ, ದರ ಕುಸಿತದಿಂದ ಹೈರಾಣಾಗಿರುವ ರೈತರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೂಪಿಸಿರುವ ‘ಯಂತ್ರಶ್ರೀ’ ಪದ್ಧತಿ ಅಡಿ ಭತ್ತದ ಯಾಂತ್ರಿಕ್ರತ ನಾಟಿಗೆ ಮುಂದಾಗಿದ್ದಾರೆ. ಈ ಪದ್ಧತಿಯಿಂದ ಉತ್ತಮ ಇಳುವರಿ ಪಡೆದಿದ್ದಾರೆ,
ಬೈಂದೂರು ತಾಲೂಕಿನ ಹಲವು ಗ್ರಾಮದಲ್ಲಿ ಹಲವಾರು ರೈತರು ‘ಯಂತ್ರಶ್ರೀ’ ಪದ್ಧತಿ ಅಡಿ ಭತ್ತದ ನಾಟಿ ಮಾಡುತ್ತಿದ್ದಾರೆ. ಭತ್ತದ ಸಸಿ ಮಡಿ ತಯಾರಿಯಿಂದ ಕೊಯ್ಲಿನವರೆಗೂ ಸಂಸ್ಥೆಯಿಂದಲೇ ಅಗತ್ಯ ಪರಿಕರ ಹಾಗೂ ಯಂತ್ರ ಒದಗಿಸಲಾಗುತ್ತಿದೆ. ಯೋಜನೆಯ ಕೃಷಿ ಮೇಲ್ವಿಚಾರಕರು, ಹಾಗೂ ಯಂತ್ರಶ್ರೀ ಯೋಧರು ಜಮೀನುಗಳಿಗೆ ಭೇಟಿ ನೀಡಿ ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಈ ವರ್ಷ ಮುಂಗಾರು ಹಂಗಾಮಿನಲ್ಲಿ ಮೂರು ಸಾವಿರ ಎಕರೆ ಯಾಂತ್ರಿಕ್ರತ ಭತ್ತ ಬೇಸಾಯ ಮಾಡುವ ಯೋಜನೆ ಹೊಂದಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬೈಂದೂರು ತಾಲೂಕು ಯೋಜನಾಧಿಕಾರಿ ವಿನಾಯಕ ಪೈ, ಉಡುಪಿ ಪ್ರಾದೇಶಿಕ chsc ವಿಭಾಗಿಯ ಯೋಜನಾಧಿಕಾರಿ ಹರೀಶ್ ಆರ್ ಎಸ್, ಮಾಜಿ ಸೈನಿಕರು ಮುತ್ತಯ್ಯ ಪೂಜಾರಿ, ತಾಲೂಕು ಭಜನಾ ಪರಿಷತ್ ಉಪಾಧ್ಯಕ್ಷ ಮಂಜುನಾಥ್ ಪೂಜಾರಿ, ಮುಕಾಂಭಿಕಾ ಬತ್ತ ಬೆಳೆಗಾರರ ಸಿಇಓ ಅನಿಲ್, ಕೃಷಿ ಮೇಲ್ವಿಚಾರಕರು ರಾಜು ಮತ್ತು ಅರ್ಪಿತ್, ಮಯ್ಯಾಡಿ ಒಕ್ಕೂಟ ಅಧ್ಯಕ್ಷರು ಗೀತಾ ಹಾಗೂ ಪದಾಧಿಕಾರಿಗಳು, ರೈತರು ದೇವಮ್ಮ, ರಾಮ ಪೂಜಾರಿ, ನಾಗರಾಜ್, ಸಂತೋಷ್ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular