Sunday, July 14, 2024
Homeಅಪಘಾತಸುಳ್ಯ: ಕಂದಕಕ್ಕೆ ಉರುಳಿದ ಕಾರು

ಸುಳ್ಯ: ಕಂದಕಕ್ಕೆ ಉರುಳಿದ ಕಾರು

ಸುಳ್ಯ: ಕೇರಳದ ಬಂದಡ್ಕಕ್ಕೆ ತೆರಳುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಸುಳ್ಯದಿಂದ ನಾರ್ಕೋಡು-ಕೊಲ್ಚಾರು ರಸ್ತೆಯ ಮೂಲಕ ಕೇರಳದ ಬಂದಡ್ಕಕ್ಕೆ ತೆರಳುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ.

ಬೆಂಗಳೂರಿನಿಂದ ಬಂದ ಯುವಕರ ತಂಡ ಸುಳ್ಯದಲ್ಲಿ ಇಳಿದು ಕಾರಿನ ಮೂಲಕ ತಮ್ಮ ಊರಿಗೆ ಮರಳುವ ವೇಳೆ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES
- Advertisment -
Google search engine

Most Popular