Sunday, January 19, 2025
Homeಗದಗಅಪ್ರಾಪ್ತರಿಂದ ವಾಹನ ಚಾಲನೆ: ಪೋಷಕರು, ವಾಹನ ಮಾಲಕರಿಗೆ ಖಡಕ್‌ ಸಂದೇಶ ರವಾನಿಸಿದ ಗದಗ ಕೋರ್ಟ್‌

ಅಪ್ರಾಪ್ತರಿಂದ ವಾಹನ ಚಾಲನೆ: ಪೋಷಕರು, ವಾಹನ ಮಾಲಕರಿಗೆ ಖಡಕ್‌ ಸಂದೇಶ ರವಾನಿಸಿದ ಗದಗ ಕೋರ್ಟ್‌

ಗದಗ: ಅಪ್ರಾಪ್ತರಿಗೆ ಸಾರ್ವಜನಿಕ ರಸ್ತೆಯಲ್ಲಿ ವಾಹನ ಚಾಲನೆಗೆ ಅವಕಾಶ ಕಲ್ಪಿಸುವ ಪೋಷಕರು ಮತ್ತು ವಾಹನ ಮಾಲಕರಿಗೆ ಖಡಕ್‌ ಸಂದೇಶ ರವಾನಿಸುವ ಮೂಲಕ ಗದಗ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ ರಾಜ್ಯಕ್ಕೆ ಉತ್ತಮ ಸಂದೇಶವನ್ನು ಸಾರಿದೆ.

ವಾಹನ ಪರವಾನಿಗೆಗೆ ಅವಕಾಶ ಕಲ್ಪಿಸಿದ ಪೋಷಕರಿಗೆ ಭಾರೀ ಮೊತ್ತದ ದಂಡ ವಿಧಿಸುವ ಮೂಲಕ ಗದಗ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯದ ನ್ಯಾಯಾಧೀಶೆ ದೀಪ್ತಿ ನಾಡಗೌಡ ಇಡೀ ರಾಜ್ಯಕ್ಕೆ ಉತ್ತಮ ಸಂದೇಶ ರವಾನಿಸಿದ್ದಾರೆ.

ಭಾರತೀಯ ನ್ಯಾಯ ಸುರಕ್ಷಾ ಸಂಹಿತೆಯ ಸೆಕ್ಷನ್ 275ರ ಪ್ರಕಾರ ಈ ತೀರ್ಪು ನೀಡಿದ ನ್ಯಾಯಾಲಯ ಆರೋಪಿಯನ್ನು ಭಾರತೀಯ ವಾಹನ ಕಾಯ್ದೆಯ ಕಲಂ 199A ಅಡಿಯಲ್ಲಿ ಶಿಕ್ಷೆ ಪ್ರಕಟಿಸಿದೆ. ವಾಹನ ಮಾಲಕರಿಗೆ 25 ಸಾವಿರ ರೂ. ದಂಡ ವಿಧಿಸುವ ಮೂಲಕ ಇಡೀ ದೇಶಕ್ಕೆ ಉತ್ತಮ ಸಂದೇಶವನ್ನು ಸಾರಿದ್ದಾರೆ.
ಆರೋಪಿ ವಿಜಯ್ ಬಿನ್ ಬಸಪ್ಪ ಬಿನ್ನಲ್ ಎಂಬಾತ ನ್ಯಾಯಾಲಯಕ್ಕೆ ಈ ದಂಡವನ್ನು ಪಾವತಿಸಿದ್ದಾರೆ. ಆರೋಪಿಯು 25 ಸಾವಿರ ರೂ. ದಂಡ ಕಟ್ಟಿರುವ ಕೋರ್ಟ್‌ನ ಚಲನ್ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದ್ದು, ಭಾರೀ ಜನಮೆಚ್ಚುಗೆಗೆ ಪಾತ್ರವಾಗಿದೆ.

RELATED ARTICLES
- Advertisment -
Google search engine

Most Popular