Thursday, April 24, 2025
Homeಉಡುಪಿಉಡುಪಿಯಲ್ಲಿ ದುಬೈ ದೇಶದ ಕಾರುಗಳ ಓಡಾಟ..!

ಉಡುಪಿಯಲ್ಲಿ ದುಬೈ ದೇಶದ ಕಾರುಗಳ ಓಡಾಟ..!

ಕೇರಳ ಮೂಲದ ದುಬೈನಲ್ಲಿ ವಾಸವಿರುವ ಸುಲೈಮನ್ ಮೊಹಮ್ಮದ್, ಮೊಹಮ್ಮದ್ ಶರೀಫ್ ಹಾಗೂ ಅಬ್ದುಲ್ ನಜೀರ್ ಅತೀ ಎಂಬುವರು ಕಾರ್ ಬ್ಲಾಗ್ ಮಾಡುತ್ತಾ ದುಬೈ ದೇಶದ ಡಾಡ್ಜ್ ಚಾಲೆಂಜರ್ ಹೆಸರಿನ‌ ಸ್ಪೋರ್ಟ್ಸ್ ಕಾರನ್ನು ಭಾರತಕ್ಕೆ ತಂದಿದ್ದಾರೆ.

ದುಬೈನಲ್ಲಿ ಈ‌ ಕಾರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿವೆ. ಆದರೆ, ಭಾರತದಲ್ಲಿ ದುಬೈ ನೊಂದಣಿಯ ಕಾರುಗಳ ಓಡಾಡಕ್ಕೆ ಅವಕಾಶವಿಲ್ಲ. ಆದರೆ, ಅನುಮತಿ ಪಡೆದು ದುಬೈ ದೇಶದ ಕಾರುಗಳನ್ನು ಭಾರತದಲ್ಲಿ ಆರು ತಿಂಗಳ ಮಟ್ಟಿಗೆ ಮಾತ್ರ ಓಡಾಡಿಸಬಹುದು. ಹೀಗಾಗಿ, ಮೂವರು ಯುವಕರು ಭಾರತದಲ್ಲಿ ಕಾರು ಓಡಿಸಲು ದುಬೈ ದೇಶದ ಅಲ್ಲಿನ ಸರ್ಕಾರಕ್ಕೆ 30 ಲಕ್ಷ ಮತ್ತು ಭಾರತಕ್ಕೆ 1ಕೋಟಿ ರೂ. ಹಣವನ್ನು ನೀಡಿ ಅನುಮತಿ‌ ಪಡೆದು ಹಡಗಿನ ಮೂಲಕ ಮೂವರು ಕಾರುಗಳನ್ನು ಕೇರಳಕ್ಕೆ ತಂದಿದ್ದಾರೆ.

ಬಳಿಕ, ಮೂವರು ಯುವಕರು ಡಾಡ್ಜ್ ಚಾಲೆಂಜರ್​ ಕಾರಿನಲ್ಲಿ ‌ಕೇರಳದಿಂದ ಬೆಂಗಳೂರಿಗೆ ಬಂದಿದ್ದಾರೆ. ನಂತರ, ಮಣಿಪಾಲ ವಿಶ್ವವಿದ್ಯಾಲಯದ ಓರ್ವ ವಿದ್ಯಾರ್ಥಿಯ ಆಹ್ವಾನದ ಮೇರೆಗೆ ಮೂವರು ಯುವಕರು ಪಾರ್ಟಿ ಮಾಡಲು ‌ಮಣಿಪಾಲಕ್ಕೆ ತೆರಳಿದ್ದಾರೆ.

ಡಾಡ್ಜ್ ಚಾಲೆಂಜರ್ ‌ಕಾರಿನಲ್ಲಿ ಮಣಿಪಾಲಕ್ಕೆ ತೆರಳಿದ ಮೂವರು ಯುವಕರು ಜಿಲ್ಲಾಧಿಕಾರಿ ರಸ್ತೆಯಲ್ಲಿ ಪಾರ್ಟಿ ಮಾಡಿದ್ದಾರೆ. ಬಳಿಕ ಕಾರನ್ನು ವೇಗವಾಗಿ ಬೇಕಾಬಿಟ್ಟಿಯಾಗಿ ಓಡಿಸಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಮಣಿಪಾಲ ಠಾಣೆ ಪೊಲೀಸರು ಕಾರುಗಳನ್ನು ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ.

ಬಳಿಕ, ಪೊಲೀಸರು ದಾಖಲೆ ಪರಿಶೀಲನೆ ಮಾಡಿ, ಹೆಚ್ಚಿನ ತನಿಖೆಗೆ ಆರ್​ಟಿಓ ಕಚೇರಿಗೆ ಪತ್ರ ಬರೆದಿದ್ದಾರೆ. 24 ಗಂಟೆ ಬಳಿಕ‌ ಆರ್​ಟಿಓ ಅಧಿಕಾರಿಗಳು ಕಾರು ಓಡಾಟದ ಅನುಮತಿ ದೃಢೀಕರಿಸಿದ್ದಾರೆ. ಕೊನೆಗೆ ಕರ್ಕಶ ಸದ್ದಿಗೆ 1500 ರೂ. ದಂಡ ಕಟ್ಟಿಸಿಕೊಂಡು, ಕಾರು ಬಿಟ್ಟು ಕಳುಹಿಸಿದ್ದಾರೆ. ಒಟ್ಟಾರೆಯಾಗಿ ಗೊಂದಲ ನಡುವೆ ದುಬೈ ನೊಂದಣಿಯ ಈ ಅಬ್ಬರದ ಕಾರುಗಳು ಕೊನೆಗೂ ರೋಡಿಗೆ ಇಳಿದಿವೆ. ಯುವಕರು ಬ್ಲಾಗ್ ಮಾಡುತ್ತಾ ರೋಡ್ ಟ್ರಿಪ್ ಮುಂದುವರೆಸಿದ್ದಾರೆ.

RELATED ARTICLES
- Advertisment -
Google search engine

Most Popular