ಕಾಸರಗೋಡು: ವಿಮಾನದ ಆಕಾರದ ಡ್ರೋನ್ ಒಂದು ಮಂಜೇಶ್ವರ ಚಿಗುರುಪಾದೆಯ ಜನನಿಭಿಡ ಪ್ರದೇಶದಲ್ಲಿ ಪತ್ತೆಯಾಗಿದೆ. ಇದು ಸ್ಥಳೀಯರಲ್ಲಿ ಕೆಲವು ಹೊತ್ತು ಆತಂಕವನ್ನುಂಟು ಮಾಡಿತ್ತು.
ಡ್ರೋನ್ ಪತ್ತೆಯಾದ ಸ್ಥಳಕ್ಕೆ ಮಂಜೇಶ್ವರ ಪೊಲೀಸರು ಆಗಮಿಸಿ ಪರಿಶೀಲಿಸಿದರು. ಬಳಿಕ ಡ್ರೋನ್ ಗೇಲ್ ಸಂಸ್ಥೆಗೆ ಸೇರಿದ್ದು ಎಂಬುದು ತಿಳಿದುಬಂದಿದೆ. ಡ್ರೋನ್ ಬಿದ್ದ ದೃಶ್ಯ ನೋಡಲು ಸ್ಥಳದಲ್ಲಿ ಅಪಾರ ಸಂಖ್ಯೆಯ ಜನರು ನೆರೆದಿದ್ದರು.
ಗ್ಯಾಸ್ ಪೈಪ್ ಲೈನ್ ಸಮೀಕ್ಷೆಗೆ ಡ್ರೋನ್ ಬಳಸುತ್ತಿದ್ದಾಗ ಡ್ರೋನ್ ಜಿಪಿಎಸ್ ಸಂಪರ್ಕ ಕಳೆದುಕೊಂಡಿತು. ಬಳಿಕ ಅದು ಈ ಪ್ರದೇಶದಲ್ಲಿ ನೆಲಕ್ಕೆ ಅಪ್ಪಳಿಸಿತು. ಗೇಲ್ ಸಿಬ್ಬಂದಿ ಡ್ರೋನ್ ಹಿಂಪಡೆದಿದ್ದಾರೆ.