ಮಾಸ್ಕೋ: ಅಮೆರಿಕಾ ವಿಶ್ವ ವಾಣಿಜ್ಯ ಕಟ್ಟಡಕ್ಕೆ ವಿಮಾನ ದಾಳಿ ಮಾಡಿದಂತೆ ಈಗ ರಷ್ಯಾದ ಕಜಾನ್‌ನಲ್ಲಿನ ಗಗನಚುಂಬಿ ಕಟ್ಟಡಗಳ ಮೇಲೆ ಶನಿವಾರ ಹಲವಾರು ಸ್ಫೋಟಕಗಳನ್ನು ತುಂಬಿದ ಡ್ರೋನ್‌ಗಳು ಅಪ್ಪಳಿಸಿವೆ.
ಡ್ರೋನ್ ಅಪ್ಪಲಿಸಿದ ರಭಸಕ್ಕೆ ಬೆಂಕಿ ಹೊತ್ತಿಕೊಂಡ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿವೆ. ಕಟ್ಟಡದಿಂದ ನಿವಾಸಿಗಳನ್ನು ಕೂಡಲೇ ಸ್ಥಳಾಂತರಿಸಲಾಗಿದ್ದು, ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಜಾನ್‌ನಲ್ಲಿ ಮೂರು ಕಾಮಿಕೇಜ್ ಡ್ರೋನ್‌ಗಳು ವಸತಿ ಎತ್ತರದ ಕಟ್ಟಡಗಳನ್ನು ಹೊಡೆದವು ಎಂದು ವರದಿಯಾಗಿದೆ. ದಾಳಿಯ ನಂತರ, ಕಜಾನ್ ವಿಮಾನ ನಿಲ್ದಾಣದ ಎಲ್ಲಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ತನ್ನ ಮತ್ತು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಮಾತುಕತೆ ನಡೆದರೆ ಉಕ್ರೇನ್‌ನಲ್ಲಿ ರಾಜಿ ಮಾಡಿಕೊಳ್ಳಲು ರಷ್ಯಾ ಸಿದ್ಧವಾಗಿದೆ ಎಂದು ಗುರುವಾರ ಹೇಳಿದ್ದರು. ಉಕ್ರೇನಿಯನ್ ಅಧಿಕಾರಿಗಳೊಂದಿಗೆ ಮಾತುಕತೆಯನ್ನು ಪ್ರಾರಂಭಿಸಲು ಯಾವುದೇ ಷರತ್ತುಗಳಿಲ್ಲ ಎಂದು ಅವರು ತಿಳಿಸಿದ್ದರು.
ರಷ್ಯಾದ ಬಹುಮಹಡಿ ಕಟ್ಟಡಗಳ ಮೇಲೆ ಡ್ರೋನ್ ದಾಳಿ
RELATED ARTICLES