Monday, December 2, 2024
Homeರಾಜ್ಯದುರ್ಗಾದೇವಿ ಮೂರ್ತಿ ವಿಸರ್ಜನೆ ಬಳಿಕ ಕೋಮು ಸಂಘರ್ಷಕ್ಕೆ ತಿರುಗಿದ ಇಬ್ಬರ ನಡುವಿನ ಗಲಾಟೆ, ಲಾಠಿ ಚಾರ್ಜ್

ದುರ್ಗಾದೇವಿ ಮೂರ್ತಿ ವಿಸರ್ಜನೆ ಬಳಿಕ ಕೋಮು ಸಂಘರ್ಷಕ್ಕೆ ತಿರುಗಿದ ಇಬ್ಬರ ನಡುವಿನ ಗಲಾಟೆ, ಲಾಠಿ ಚಾರ್ಜ್

ಚಿಕ್ಕೋಡಿ: ದುರ್ಗಾದೇವಿ ಮೂರ್ತಿ ವಿಸರ್ಜನೆ ಬಳಿಕ ಎರಡು ಕೋಮಿನ ನಡುವೆ ಗಲಾಟೆ ನಡೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಗಲಾಟೆ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಲಘು ಲಾಠಿ ಚಾರ್ಜ್​ ಮಾಡಿ ಜನರನ್ನು ಚದುರಿಸಿದರು. ಗಲಾಟೆಯಲ್ಲಿ ಮೂವರಿಗೆ ಗಾಯವಾಗಿದ್ದು, ಎರಡು ಬೈಕ್ ಹಾಗೂ ಕಾರು ಜಖಂಗೊಂಡಿದೆ.
ದುರ್ಗಾದೇವಿ ಮೂರ್ತಿ ವಿಸರ್ಜನೆ ಮುಗಿಸಿಕೊಂಡು ಬರುವಾಗ ಅಮಿತ ನಾಯಿಕ ಹಾಗೂ ಪೈರೋಜ್ ಎಂಬುವವರ ಮಧ್ಯೆ ಗಲಾಟೆ ಶುರುವಾಗಿದೆ. ಈ ವೇಳೆ ಅಲ್ಲಿಯೇ ಇದ್ದ ಮಸೀದಿಯ ಮೈಕ್​ನಲ್ಲಿ ಅನ್ಯಕೋಮಿನ ಯುವಕರಿಂದ ನಮ್ಮವರ ಮೇಲೆ ಹಲ್ಲೆಯಾಗಿದೆ ಎಲ್ಲರೂ ಬನ್ನಿ ಎಂದು ಅನೌನ್ಸ್​ ಮಾಡಲಾಗಿದೆ.
ಅನೌನ್ಸ್​ನಿಂದ ಪ್ರಚೋದನೆಗೊಂಡ ಹಿಂದೂ ಮತ್ತು ಮುಸ್ಲಿಂ ಜನರು ಕೂಡಲೆ ಮಸೀದಿ ಬಳಿ ಸೇರಿದ್ದಾರೆ. ಎರಡು ಗುಂಪಿನ ಜನ ಸೇರುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿ, ಜನರನ್ನು ಚದುರಿಸಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು, ಎರಡು ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದೆ. ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES
- Advertisment -
Google search engine

Most Popular