ಕಟಪಾಡಿ: ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ದ್ವಾರಕಾಮಯಿ ಮಠದ ಪೀಠಾಧಿಪತಿ ಶ್ರೀ ಸಾಯಿ ಈಶ್ವರ ಗುರೂಜಿ ಅವರ 108 ದಿನಗಳಲ್ಲಿ 108 ಕ್ಷೇತ್ರ ಪ್ರದಕ್ಷಣೆ ಅಂಗವಾಗಿ 17 ದಿನದ ಪ್ರದಕ್ಷಿಣೆ ಜೂನ್ 30ರಂದು ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಆಡಳಿತ ಧಮ೯ದಶಿ೯ ಶಶಿಧರ ವಾಗ್ಲೆ, ಗುರೂಜಿಯವರನ್ನು ಬರಮಾಡಿಕೊಂಡರು.
ಈ ಸಂದಭ೯ದಲ್ಲಿ ದೇವಳದಲ್ಲಿ ನಡೆದ ಶ್ರೀ ರಾಮ ತಾರಕ ಯಜ್ಞ ಕಾರ್ಯಕ್ರಮವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದಭ೯ದಲ್ಲಿ ದೇವಸ್ಥಾನದ ಪುರೋಹಿತರಾದ ಸಂದೇಶ ಭಟ್, ವೆಂಕಟೇಶ್ ಭಟ್, ಶಿವಾನಂದ ಭಟ್, ರಾಘವೇಂದ್ರ ಪ್ರಭು, ಕವಾ೯ಲು, ಶಿಲ್ಪಾ ಮಹೇಶ್, ಸತೀಶ್ ದೇವಾಡಿಗ, ನಿಲೇಶ್, ಪ್ರದೀಪ್ ಪೂಜಾರಿ, ಶಶಾಂಕ್ ಬಂಗೇರ, ನಿಮಿಶ್ ಜತ್ತನ್ ಮುಂತಾದವರು ಉಪಸ್ಥಿತರಿದ್ದರು.