ರಾಮಕೃಷ್ಣ ಮಿಷನ್ ಮಂಗಳೂರು, ಸಮಾಜದ ಒಳಿತಿಗಾಗಿ ಹಲವಾರು ಕಾರ್ಯಕ್ರಮಗಳನ್ನು ನಿರ್ವಹಿಸುತ್ತಾ ಬಂದಿದೆ. ಯುವಪೀಳಿಗೆಯಲ್ಲಿ ಮೌಲ್ಯಗಳ ಅಳವಡಿಕೆಯೇ ಅದರ ಪ್ರಧಾನದೃಷ್ಟಿ ಹಾಗೂ ಅದರ ಅನೇಕ ಚಟುವಟಿಕೆಗಳ ಮುಖ್ಯ ಉದ್ದೇಶವೂ ಅದೇ ಆಗಿದೆ. “ನಿಜವಾದ ಶಿಕ್ಷಣವೆಂದರೆ ಅದು ಒಬ್ಬ ವ್ಯಕ್ತಿಯನ್ನು ತನ್ನ ಕಾಲ ಮೇಲೆ ತಾನು ನಿಲ್ಲುವಂತೆ ಮಾಡಬೇಕು. ಜೀವನ ನಿರ್ಮಾಣಕ್ಕೆ, ಮನುಷ್ಯ ನಿರ್ಮಾಣಕ್ಕೆ, ಶೀಲ ನಿರ್ಮಾಣಕ್ಕೆ ಸಹಾಯಕವಾಗುವ ಭಾವನೆಗಳನ್ನು ರಕ್ತಗತಮಾಡಿಕೊಡಬಲ್ಲ ಶಿಕ್ಷಣ ನಮಗೆ ಬೇಕು” ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ.
ಮಂಗಳೂರಿನ ರಾಮಕೃಷ್ಣ ಮಿಷನ್ ಆಧುನಿಕ ಯುವ ಪೀಳಿಗೆಯಲ್ಲಿ ಜೀವನ ಮೌಲ್ಯಗಳನ್ನು ತುಂಬಲು ವಿವಿಧ ಮೌಲ್ಯಾಧಾರಿತ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಕಳೆದ ಹತ್ತು ವರ್ಷಗಳಿಂದ ವೃತ್ತಿಪರ ಕೋರ್ಸುಗಳ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು, ಅಧ್ಯಾಪಕರು-ಪ್ರಾಧ್ಯಾಪಕರಿಗಾಗಿ ಮತ್ತು ಪ್ರಥಮ ದರ್ಜೆ ವಿದ್ಯಾರ್ಥಿಗಳಿಗೆ ಕ್ರಮವಾಗಿ ಪ್ರಜ್ಞಾ, ಶ್ರದ್ಧಾ, ಮೇಧಾ ಎಂಬ ಮೂರು ದಿನಗಳ ವಿಚಾರ ಸಂಕಿರಣಗಳನ್ನು ಆಯೋಜಿಸುತ್ತಿದೆ. 1893 ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಂಸತ್ತಿನಲ್ಲಿ ಸ್ವಾಮಿ ವಿವೇಕಾನಂದರ ಐತಿಹಾಸಿಕ ಭಾಷಣದ ಸ್ಮರಣಾರ್ಥ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ವರ್ಷ ಶಿಕ್ಷಣ ಮತ್ತು ಮಾನವ ಶ್ರೇಷ್ಠತೆ ಎಂಬ ವಿಷಯದ ಮೇಲೆ ಚಿಂತನೆ ನಡೆಯಲಿದೆ. ಸಂವಾದವು ಮಂಗಳೂರು ರಾಮಕೃಷ್ಣಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದ್ದು, ಪ್ರಜ್ಞಾ -ವೃತ್ತಿಪರ ಕೋರ್ಸುಗಳ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 11, 2024, ಬುಧವಾರದಂದು, ಶ್ರದ್ಧಾ – ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 12, 2024, ಗುರುವಾರದಂದು, ಮತ್ತು ಮೇಧಾ – ಪದವಿ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 13, 2024, ಶುಕ್ರವಾರದಂದು
ಆಯೋಜಿಸಲಾಗಿದೆ.
ಪ್ರಜ್ಞಾ – ವಿಚಾರಸಂಕಿರಣವನ್ನು ಕ್ಯಾಪ್ಟನ್ ಬ್ರಿಜೇಶ್ ಚೌಟ (ಮಾನ್ಯ ಸಂಸದರು, ದಕ್ಷಿಣ ಕನ್ನಡ)ರವರು ಸೆಪ್ಟೆಂಬರ್ 11 ರಂದು ಬೆಳಿಗ್ಗೆ 9:30ಕ್ಕೆ ಉದ್ಘಾಟಿಸುತ್ತಾರೆ. ಪ್ರೊಫೆಸರ್ ಪಿ.ಲ್ ಧರ್ಮ (ಗೌರವಾನ್ವಿತ ಕುಲಪತಿಗಳು ಮಂಗಳೂರು ವಿಶ್ವವಿದ್ಯಾನಿಲಯ) ರವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸುವರು. ಡಿ. ವೇದವ್ಯಾಸ ಕಾಮತ್ (ಶಾಸಕರು, ಮಂಗಳೂರು ದಕ್ಷಿಣ) ರವರು ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ
ಆಗಮಿಸಲಿದ್ದಾರೆ. ಉದ್ಘಾಟನಾ ಸಮಾರಂಭದ ನಂತರ ಸಂಪನ್ಮೂಲ ವ್ಯಕ್ತಿಗಳಿಂದ ಭಾಷ ಹಾಗೂ ಸಂವಾದ ಇರುತ್ತದೆ. ಪೂಜ್ಯ ಸ್ವಾಮಿ ಆತ್ಮಶ್ರದ್ಧಾನಂದಜಿ (ಕಾರ್ಯದರ್ಶಿ ರಾಮಕೃಷ್ಣ ಮಿಷನ್ ಆಶ್ರಮ, ಕಾನ್ಪುರ) ಯವರು ಮತ್ತು ಶ್ರೀ ಎಸ್ ಎನ್ ಶ್ರೀನಿವಾಸ್ (ಮಾನವ ಸಂಪನ್ಮೂಲ ಕಾರ್ಯನಿರ್ವಾಹಕ ಮತ್ತು ತಂತ್ರಜ್ಞ, ಹೈದರಾಬಾದ್) ರವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ. ನಂತರ “ಶಿಕ್ಷಣ ಮತ್ತು ಮಾನವ ಶ್ರೇಷ್ಠತೆ” ಎಂಬ ವಿಷಯವಾಗಿ ಡಾ. ಚಂದ್ರಶೇಖರ್ ಜೆ ಸೊರಕೆ (ಗ್ಯಾಸ್ಟ್ರೋಎಂಟರಾಲಜಿಸ್ಟ್ ಎಸ್‌ಸಿಎಸ್ ಆಸ್ಪತ್ರೆ ಮಂಗಳೂರು) ಯವರು ಮತ್ತು ಅರ್ಜುನ್ ಮಸ್ಕರೇನ್ಹಸ್ (ಪರಿಸರವಾದಿ, ಮಂಗಳೂರು) ರವರು ಚರ್ಚಿಸಲಿದ್ದಾರೆ.
ಶ್ರದ್ಧಾ – ವಿಚಾರಸಂಕಿರಣವನ್ನು ಯು ಟಿ ಖಾದರ್ (ಗೌರವಾನ್ವಿತ ಸ್ಪೀಕರ್, ಕರ್ನಾಟಕ ವಿಧಾನಸಭೆ) ರವರು ಸೆಪ್ಟೆಂಬರ್ 12 ರಂದು ಉದ್ಘಾಟಿಸುತ್ತಾರೆ. ಮುಲ್ಲೈ ಮುಹಿಲನ್ ಐಎಎಸ್ (ಜಿಲ್ಲಾಧಿಕಾರಿ ದಕ್ಷಿಣ ಕನ್ನಡ) ರವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸುವರು.
ಶ್ರೀನಿವಾಸ ಪ್ರಾಣೇಶ್ (ನಿರ್ದೇಶಕರು ಬಿ ಎ ಎಸ್ ಎಫ್ ಇಂಡಿಯಾ ಲಿಮಿಟೆಡ್, ಬೆಂಗಳೂರು) ರವರು ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಉದ್ಘಾಟನಾ ಸಮಾರಂಭದ ನಂತರ ಸಂಪನ್ಮೂಲ ವ್ಯಕ್ತಿಗಳಿಂದ ಭಾಷಣ ಹಾಗೂ ಸಂವಾದ ಇರುತ್ತದೆ. ಪೂಜ್ಯ ಸ್ವಾಮಿ ಆತ್ಮಶ್ರದ್ಧಾನಂದಜಿ ಮತ್ತು ಎಸ್ ಎನ್ ಶ್ರೀನಿವಾಸ್ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ. ನಂತರ ನಡೆಯುವ ಚರ್ಚೆಯಲ್ಲಿ- ಸ್ಟೀವನ್ ಪಿಂಟೋ (ಲೀಡ್ ಎಚ್.ಆರ್, ಎಂಆರ್‌ಪಿಎಲ್, ಮಂಗಳೂರು) ರವರು ಮತ್ತು ಸುಭಾಷ್ ಹೆಚ್. ಜೆ (ಮಾನಸಿಕ ಆರೋಗ್ಯ ಶಿಕ್ಷಣಾಧಿಕಾರಿ ನಿಮ್ಹಾನ್ಸ್, ಬೆಂಗಳೂರು) ಭಾಗವಹಿಸಲಿದ್ದಾರೆ. ಮೇಧಾ – ವಿಚಾರಸಂಕಿರಣವನ್ನು ಸಂತೋಷ್ ಎಸ್. ಲಾಡ್ (ಕಾರ್ಮಿಕ ಸಚಿವರು, ಕರ್ನಾಟಕ ಸರ್ಕಾರ) ರವರು ಸೆಪ್ಟೆಂಬರ್ 13 ರಂದು ಉದ್ಘಾಟಿಸಲಿದ್ದಾರೆ.ಮಂಜುನಾಥ ಭಂಡಾರಿ (ವಿಧಾನ ಪರಿಷತ್ ಸದಸ್ಯರು) ಯವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸುವರು. ದೀಕ್ಷಿತ್ ರೈ (ಸಂಸ್ಥಾಪಕರು, ಕೋಡ್‌ಕ್ರಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್) ರವರು ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಪೂಜ್ಯ ಸ್ವಾಮಿ ಆತ್ಮ ಶ್ರದ್ಧಾನಂದಜಿ ಮತ್ತು ಸಂದೀಪ್ ವಸಿಷ್ಠ (ಹಿರಿಯ ಕಾರ್ಯಕ್ರಮ ನಿರ್ವಾಹಕ ಸ್ವಾಮಿ ವಿವೇಕಾನಂದ ಯೂಥ್ಮೂ ವ್‌ಮೆಂಟ್, ಬೆಂಗಳೂರು) ರವರು ಸಂಪನ್ಮೂಲ ವ್ಯಕ್ತಿಗಳು. ನಂತರ ನಡೆಯುವ ಚರ್ಚೆಯಲ್ಲಿ ಡಾ. ವಿರೂಪಾಕ್ಷ ದೇವರಮನೆ (ಮನೋವೈದ್ಯ ಡಾ. ಎವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ) ಮತ್ತು ರಾಘವೇಂದ್ರ ನೆಲ್ಲಿಕಟ್ಟೆ (ಪ್ರೊಪ್ರೈಟರ್ ಚೇರ್ ಸ್ಟುಡಿಯೋ ಮಂಗಳೂರು) ಭಾಗವಹಿಸಲಿದ್ದಾರೆ.
ಪೂರ್ವ ನೋಂದಣಿಯ ಮೂಲಕ ಈ ವಿಚಾರ ಸಂಕಿರಣಗಳಿಗೆ ಪ್ರವೇಶವನ್ನು ಪಡೆಯಬಹುದು ಎಂದು ಪ್ರಕಟಣೆಗೆ ತಿಳಿಸಿದ್ದಾರೆ.
ಸೆ.11-13: ರಾಮಕೃಷ್ಣ ಮಠದಲ್ಲಿ ಶೈಕ್ಷಣಿಕ ವಿಚಾರ ಸಂಕಿರಣ
RELATED ARTICLES