Saturday, April 26, 2025
Homeಬೆಂಗಳೂರುದಿ/ನಡ್ಜ್ ಪ್ರಶಸ್ತಿ ವಿಜೇತ ಇಎಫ್ ಪಾಲಿಮರ್‌ಗೆ 2 ಕೋಟಿ ರೂ. ಬಹುಮಾನ: ಡಿಸಿಎಂ ಶ್ರೀರಾಮ್ ಅಗ್‌ವಾಟರ್ ಚಾಲೆಂಜ್

ದಿ/ನಡ್ಜ್ ಪ್ರಶಸ್ತಿ ವಿಜೇತ ಇಎಫ್ ಪಾಲಿಮರ್‌ಗೆ 2 ಕೋಟಿ ರೂಬಹುಮಾನಡಿಸಿಎಂ ಶ್ರೀರಾಮ್ ಅಗ್‌ವಾಟರ್ ಚಾಲೆಂಜ್

ಬೆಂಗಳೂರು: ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯ ಸಹಭಾಗಿತ್ವದಲ್ಲಿ ಡಿಸಿಎಂ ಶ್ರೀರಾಮ್ ಫೌಂಡೇಶನ್ ಮತ್ತು ದಿ/ನಡ್ಜ್ ಇನ್‌ಸ್ಟಿಟ್ಯೂಟ್, ಇಎಫ್ ಪಾಲಿಮರ್ ಅನ್ನು ಡಿಸಿಎಂ ಶ್ರೀರಾಮ್ ಅಗ್‌ವಾಟರ್ ಚಾಲೆಂಜ್‌ನ ವಿಜೇತ ಎಂದು ಘೋಷಿಸಲಾಯಿತು. ಭಾರತದ ಸಣ್ಣ ಹಿಡುವಳಿದಾರ ರೈತರ ನೀರಿನ ಬಳಕೆಯ ದಕ್ಷತೆಯನ್ನು ಹೆಚ್ಚಿಸಲು ಮತ್ತು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಅನ್ವೇಷಿಸಿದ ಪ್ರವರ್ತಕ ಪರಿಹಾರಗಳಿಗಾಗಿ ಇಎಫ್ ಪಾಲಿಮರ್‌ಗೆ 2 ಕೋಟಿ ರೂ. ಬಹುಮಾನ ನೀಡಲಾಯಿತು. ಭಾರತದ ಜಿ20 ಶೆರ್ಪಾ ಮತ್ತು ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ. ಫಾರ್ಮ್2ಫೋರ್ಕ್ ಟೆಕ್ನಾಲಜೀಸ್‌ನ ಕೃಷಿ-ತಂತ್ರಜ್ಞಾನ ವೇದಿಕೆಯಾದ ಕಲ್ಟ್‌ ವೈವೇಟ್ ಕೂಡ ವಿಶೇಷ ಮನ್ನಣೆಯನ್ನು ಪಡೆಯಿತು ಮತ್ತು ನೀರಾವರಿಯನ್ನು ಸರಳಗೊಳಿಸುವ ಮತ್ತು ಪರಿಣಾಮಕಾರಿ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ರೈತರಿಗೆ ಸಲಹೆಯನ್ನು ಒದಗಿಸುವ ಸ್ಮಾರ್ಟ್ ನೀರಾವರಿ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವಲ್ಲಿ ನೀಡಿದ ಕೊಡುಗೆಗಳಿಗಾಗಿ 25 ಲಕ್ಷ ರೂಗಳನ್ನು ನೀಡಲಾಯಿತು.

ಜೂನ್ 2023 ರಲ್ಲಿ ಪ್ರಾರಂಭವಾದ ನಂತರ ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ಒಕ್ಕೂಟವು ಪ್ರಾರಂಭವಾಯಿತು. ಡಿಸಿಎಂ ಶ್ರೀರಾಮ್ ಅಗ್‌ವಾಟರ್ ಚಾಲೆಂಜ್ ಅನ್ನು ಭಾರತದ 1 ಮಿಲಿಯನ್ ಸಣ್ಣ ಹಿಡುವಳಿದಾರ ರೈತರ ನೀರಿನ ದಕ್ಷತೆ, ಉತ್ಪಾದಕತೆ ಮತ್ತು ಲಾಭದಾಯಕತೆಯನ್ನು ಹೆಚ್ಚಿಸುವ ಗುರಿಯೊಂದಿಗೆ ರೂಪಿಸಲಾಗಿದೆ. ಇದು, ನಾಲ್ಕು ಪ್ರಮುಖ ಹೆಚ್ಚು ನೀರನ್ನು ಬೇಡುವ ಬೆಳೆಗಳಾದ ಕಬ್ಬು, ಗೋಧಿ, ಭತ್ತ ಮತ್ತು ಹತ್ತಿಯ ಮೇಲೆ ಗಮನವನ್ನು ಕೇಂದ್ರೀಕರಿಸಿದೆ. ಒಟ್ಟು 134 ಅರ್ಜಿಗಳು ಬಂದಿದ್ದವು. ಅದರಲ್ಲಿ 16 ಅಗ್‌ಟೆಕ್ ಸಂಸ್ಥೆಗಳನ್ನು ಒಕ್ಕೂಟಕ್ಕೆ ಆಯ್ಕೆ ಮಾಡಲಾಯಿತು; ಇವು, ನೀರಾವರಿ, ಬಯೋಎಜಿ ಇನ್‌ಪುಟ್‌ಗಳು, ಸಲಹಾ ಸೇವೆಗಳು ಇತ್ಯಾದಿಗಳಲ್ಲಿನ ನಾವೀನ್ಯತೆಗಳಿಗೆ ಚಾಲನೆ ನೀಡುತ್ತಿರುವಂತಹ ಸಂಸ್ಥೆಗಳು. ಮೌಲ್ಯಮಾಪನದ ನಂತರ, ಪ್ರಗತಿಶೀಲ ಸಾಮರ್ಥ್ಯದ ಆಧಾರದ ಮೇಲೆ ನಾಲ್ಕು ಅಂತಿಮ ಸ್ಪರ್ಧಿಗಳನ್ನು ಗುರುತಿಸಲಾಯಿತು: ಇಎಫ್ ಪಾಲಿಮರ್, ಕಲ್ಟ್‌-ವೈವೇಟ್, ಇಂಡಸ್‌ಟಿಲ್ ಮತ್ತು ಫೈಫಾರ್ಮ್. ಒಟ್ಟಾಗಿ, ಅಂತಿಮ ಸ್ಪರ್ಧಿಗಳು ಕಳೆದ ವರ್ಷದಲ್ಲಿ ಸುಮಾರು 15,000 ಸಣ್ಣ ಹಿಡುವಳಿದಾರ ರೈತರ ಮೇಲೆ ಪ್ರಭಾವ ಬೀರಿದ್ದರು.

ಭಾರತವು ತೀವ್ರ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ತಲಾ ನೀರಿನ ಲಭ್ಯತೆ 1,486 ಘನ ಮೀಟರ್‌ಗಿಂತ ಕಡಿಮೆಯಾಗಿದೆ – 1,700 ಘನ ಮೀಟರ್ ಮಿತಿಗಿಂತ ಕಡಿಮೆ ಇದ್ದರೆ ಅದನ್ನು ನೀರಿನ  ಒತ್ತಡ (water stress) ಎನ್ನಲಾಗುತ್ತದೆ. ಭಾರತದ ಸಿಹಿನೀರಿನಲ್ಲಿ 78% ಅನ್ನು ಬಳಸುವ ಕೃಷಿಯು ಇದಕ್ಕೆ ಪ್ರಮುಖ ಕಾರಣವಾಗಿದೆ. ಕೃಷಿಗೆ ಬಳಸುವ ನೀರಿನ 62% ಬರುವುದು ವೇಗವಾಗಿ ಕ್ಷೀಣಿಸುತ್ತಿರುವ ಅಂತರ್ಜಲದಿಂದ. ಪ್ರಸ್ತುತ ದರದಲ್ಲಿ, ಭಾರತ, 2030ರ ವೇಳೆಗೆ ತನ್ನ ನೀರಿನ ಅಗತ್ಯತೆಗಳಲ್ಲಿ ಕೇವಲ 50% ಅನ್ನು ಮಾತ್ರ ಪೂರೈಸಬಲ್ಲುದಾಗಿರುತ್ತದೆ. ಇದರಿಂದ 600 ಮಿಲಿಯನ್ ರೈತರಿಗೆ ತೊಂದರೆ. ಡಿಸಿಎಂ ಶ್ರೀರಾಮ್ ಅಗ್‌ವಾಟರ್ ಚಾಲೆಂಜ್, ಹೆಚ್ಚುತ್ತಿರುವ ನೀರಿನ ಒತ್ತಡ ಮತ್ತು ಹವಾಮಾನ ಸಂಬಂಧಿತ ಸವಾಲುಗಳನ್ನು ಎದುರಿಸುತ್ತಿರುವ ಸಣ್ಣ ಹಿಡುವಳಿದಾರ ರೈತರ ಜೀವನೋಪಾಯಕ್ಕೆ ನಿರ್ಣಾಯಕವಾದ ಅಕ್ಕಿ, ಗೋಧಿ, ಕಬ್ಬು ಮತ್ತು ಹತ್ತಿಯಂತಹ ಹೆಚ್ಚು ನೀರನ್ನು ಬೇಡುವ ಬೆಳೆಗಳಿಗೆ ಪ್ರಮಾಣಾನುಬದ್ಧವಾಗಿ ಏರಿಸಬಲ್ಲ, ಹೆಚ್ಚು ಪರಿಣಾಮಕಾರಿಯಾದ ಪರಿಹಾರಗಳನ್ನು ರೂಪಿಸಲು ಆಗ್‌ವಾಟರ್‌ಟೆಕ್ ಸಂಸ್ಥೆಗಳ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ.

ಡಿಸಿಎಂ ಶ್ರೀರಾಮ್ ಲಿಮಿಟೆಡ್‌ನ ಅಧ್ಯಕ್ಷರು ಮತ್ತು ಹಿರಿಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಡಿಸಿಎಂ ಶ್ರೀರಾಮ್ ಫೌಂಡೇಶನ್‌ನ ನಿರ್ದೇಶಕರಾದ ಶ್ರೀ ಅಜಯ್ ಎಸ್ ಶ್ರೀರಾಮ್: “ಕೃಷಿಗೆ ನೀರು ಅತ್ಯಂತ ನಿರ್ಣಾಯಕ ಸಂಪನ್ಮೂಲವಾಗಿದೆ. ದೇಶದ ತೀವ್ರ ನೀರಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಸಣ್ಣ ಹಿಡುವಳಿದಾರ ರೈತರ ನೀರಿನ ಬಳಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಸಮಗ್ರ, ಆಧುನಿಕ ಪರಿಹಾರಗಳನ್ನು ಕಂಡುಕೊಳ್ಳುವ ನಿರ್ಣಾಯಕ ಧ್ಯೇಯದಿಂದ ಈ ಸವಾಲನ್ನು ರೂಪಿಸಲಾಗಿದೆ. ವಿಜೇತರನ್ನು ಮತ್ತು ಇತರ ಅಂತಿಮ ಸ್ಪರ್ಧಿಗಳನ್ನು ಅವರ ಪ್ರವರ್ತಕ ಕೆಲಸಗಳಿಗಾಗಿ ನಾವು ಅಭಿನಂದಿಸುತ್ತೇವೆ – ಮತ್ತು ಈ ಪರಿಹಾರಗಳು ದೇಶಾದ್ಯಂತ ಲಕ್ಷಾಂತರ ರೈತರ ಜೀವನವನ್ನು ಉತ್ತಮಗೊಳಿಸುತ್ತವೆ ಮತ್ತು ಪರಿವರ್ತಿಸುತ್ತವೆ ಎಂದು ಕಾತರದಿಂದ ಕಾಯುತ್ತಿದ್ದೇವೆ. ”

ದಿನಡ್ಜ್ ಪ್ರೈಜ್‌ನ ನಿರ್ದೇಶಕಿ ಕನಿಷ್ಕ ಚಟರ್ಜೀ: “ಭಾರತದ ಕೃಷಿ ಕಾರ್ಯಪಡೆಯ ಸರಿಸುಮಾರು 85% ರಷ್ಟು ಸಣ್ಣ ಹಿಡುವಳಿದಾರ ರೈತರು ಇರುವುದರಿಂದ, ಭಾರತೀಯ ಕೃಷಿಯನ್ನು ರೂಪಿಸುವ ಕ್ರಮಗಳು ನೀರನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಲು, ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ದೀರ್ಘಕಾಲೀನ ಚೈತನ್ಯಶೀಲತೆಯನ್ನು ಹೊಂದಿರಲು ಸಹಾಯ ಮಾಡುವ ಪರಿಹಾರಗಳನ್ನು ಒಳಗೊಂಡಿರಬೇಕು. ಕಳೆದ 2 ವರ್ಷಗಳಲ್ಲಿ ಡಿಸಿಎಂ ಶ್ರೀರಾಮ್ ಅಗ್‌ವಾಟರ್ ಚಾಲೆಂಜ್, ಆಗ್‌ವಾಟರ್‌ಟೆಕ್ ಸಂಸ್ಥೆಗಳು ನವೀನ ಪರಿಹಾರಗಳನ್ನು ಪ್ರಮಾಣಾನುಬದ್ಧವಾಗಿ ವಿನ್ಯಾಸಗೊಳಿಸಬಹುದು ಮತ್ತು ತಲುಪಿಸಬಹುದು ಮತ್ತು ಅವು ಗಾಢವಾಗಿ ಪ್ರಭಾವ ಬೀರುತ್ತವೆ ಎಂಬುದನ್ನು ಪ್ರದರ್ಶಿಸಿದೆ. ಆಗ್‌ವಾಟರ್ ಪರಿಸರ ವ್ಯವಸ್ಥೆಯು ಈ ಸ್ಕೇಲೆಬಲ್ ಪರಿಹಾರಗಳನ್ನು ಬೆಂಬಲಿಸುವುದನ್ನು ಮುಂದುವರಿಸುತ್ತದೆ ಮತ್ತು ಮೌಲ್ಯ ಸರಪಳಿಯಾದ್ಯಂತ ಸಂಕೀರ್ಣ ಸವಾಲುಗಳನ್ನು ಪರಿಹರಿಸಲು ಸಹಾಯ ಮಾಡುವ ಮೂಲಕ ಭಾರತದ ಸಣ್ಣ ಹಿಡುವಳಿದಾರರಿಗೆ ಪ್ರಯೋಜನಕಾರಿಯಾದ ಉನ್ನತ ತಂತ್ರಜ್ಞಾನ-ಪ್ರಧಾನ ಪ್ರಗತಿಗಳಿಗೆ ಹಾದಿಯನ್ನು ಸುಗಮಗೊಳಿಸುತ್ತದೆ ಎಂದು ನಾನು ಭಾವಿಸುತ್ತೇನೆ.”

ಪ್ರಶಸ್ತಿ ವಿಜೇತರಾದ ಇಎಫ್ ಪಾಲಿಮರ್, ಕೃಷಿಗೆ ಸಂಪನ್ಮೂಲಗಳ ಲಭ್ಯತೆಯನ್ನು ಸುಧಾರಿಸುವ ಪ್ರಯತ್ನಗಳನ್ನು ನಡೆಸುವ ಒಂದು ಕೃಷಿ-ಜೈವಿಕ ನವೋದ್ಯಮವಾಗಿದೆ. ಪ್ರಸ್ತುತ ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಇದರ ಉತ್ಪನ್ನ, ಫಸಲ್ ಅಮೃತ್, ಸಾವಯವ ಮಣ್ಣಿನ ಕಂಡಿಷನರ್ ಆಗಿದ್ದು, ಅದು ಅದರ ತೂಕಕ್ಕಿಂತ 100 ಪಟ್ಟು ನೀರನ್ನು ಹೀರಿಕೊಳ್ಳುತ್ತದೆ; ಮಣ್ಣಿನ ತೇವಾಂಶ ಧಾರಣೆ ಅತ್ಯುತ್ತಮವಾಗಿರುವಂತೆ ನೋಡಿಕೊಳ್ಳುತ್ತದೆ, ಮತ್ತು ಬೆಳೆ ಇಳುವರಿಯನ್ನು ಹೆಚ್ಚಿಸುತ್ತದೆ. ಕಳೆದ ಎರಡು ವರ್ಷಗಳಲ್ಲಿ, ಇಎಫ್ ಪಾಲಿಮರ್ 11 ರಾಜ್ಯಗಳಲ್ಲಿ 17000 ಕ್ಕೂ ಹೆಚ್ಚು ರೈತರನ್ನು ತಲುಪಿದೆ.

ಸಣ್ಣ ಹಿಡುವಳಿದಾರ ರೈತರ ಕೈಗೆಟುಕುವ ತಂತ್ರಜ್ಞಾನ ಮತ್ತು ಡೇಟ ಪಾರದರ್ಶಕತೆಗಾಗಿ ವಿಶೇಷ ಮನ್ನಣೆಯನ್ನು ಪಡೆದ ಕಲ್ಟ್- ವೈವೇಟ್ ತೇವಾಂಶ ಮಟ್ಟಗಳು, ಬೆಳೆ ಆರೋಗ್ಯ, ಪರಿಸರ ಪರಿಸ್ಥಿತಿಗಳು ಮತ್ತು ಅದರಾಚೆಗಿನ ನಿರ್ಣಾಯಕ ಒಳನೋಟಗಳನ್ನು ನೀಡಲು IoT-ಸಕ್ರಿಯಗೊಳಿಸಿದ ಮಣ್ಣಿನ ಸಂವೇದಕಗಳು, ಹವಾಮಾನ ಕೇಂದ್ರಗಳು ಮತ್ತು ಉಪಗ್ರಹ ಆಧಾರಿತ ದೂರಸ್ಥ ಸಂವೇದನೆ ಗಳನ್ನು ಬಳಸಿಕೊಳ್ಳುತ್ತದೆ. ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ, ಮಹಾರಾಷ್ಟ್ರ ಮತ್ತು ಪಂಜಾಬ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರ ಸೇವೆಗಳು ವಿಶೇಷವಾಗಿ ಭತ್ತದ ರೈತರಿಗೆ ಪ್ರಯೋಜನವನ್ನು ನೀಡುತ್ತಿವೆ.

ಇತರ ಇಬ್ಬರು ಅಂತಿಮ ಸ್ಪರ್ಧಿಗಳು ಸಹ ಕೃಷೀ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡುತ್ತಿದ್ದಾರೆ. ಇಂಡಸ್

ಟಿಲ್ ಫಾರ್ಮ್‌ಟೆಕ್ ಪ್ರೈವೇಟ್ ಲಿಮಿಟೆಡ್, ನೀರಾವರಿಯನ್ನು ಸ್ವಯಂಚಾಲಿತಗೊಳಿಸಲು, ಸೂಕ್ಷ್ಮ ನೀರಾವರಿಯನ್ನು ಉತ್ತೇಜಿಸಲು ಮತ್ತು ನೀರಿನ ದಕ್ಷತೆಯನ್ನು ಸುಧಾರಿಸಲು ಆಟೋಫಾರ್ಮ್ ಎಂಬ ಕೃಷಿ ತಂತ್ರಜ್ಞಾನ ನಾವೀನ್ಯತೆಯನ್ನು ಒದಗಿಸುತ್ತದೆ. ಇದರ IoT ಪ್ಲಾಟ್‌ಫಾರ್ಮ್ ಮೊಬೈಲ್ ಅಪ್ಲಿಕೇಶನ್ ಮೂಲಕ ನಿರ್ವಹಿಸಲ್ಪಡುವ ಸ್ಮಾರ್ಟ್ ಸಾಧನಗಳೊಂದಿಗೆ ನೀರಾವರಿ ಮತ್ತು ಫಲೀಕರಣವನ್ನು ಸ್ವಯಂಚಾಲಿತಗೊಳಿಸುತ್ತದೆ. ಇದು ನೀರು, ರಸಗೊಬ್ಬರ ಮತ್ತು ಕೀಟನಾಶಕ ಬಳಕೆಯನ್ನು ಕಡಿಮೆ ಮಾಡುವುದರೊಂದಿಗೆ ಇಳುವರಿ ಮತ್ತು ದಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪೈಫಾರ್ಮ್ (Physiz Agtech Pvt Ltd), ಯಾಂತ್ರೀಕೃತ ನೀರಾವರಿ ತಂತ್ರಜ್ಞಾನವನ್ನು ನೀಡುತ್ತದೆ. ಇದು ರೈತರು ಇಂಟೆಲಿಜೆಂಟ್ ನೀರಾವರಿ ವ್ಯವಸ್ಥೆಗಳನ್ನು ಬಳಸಿಕೊಂಡು ನೀರಿನ ಬಳಕೆಯನ್ನು ಮಾಪನ ಮಾಡುವ.

RELATED ARTICLES
- Advertisment -
Google search engine

Most Popular