ಮುಲ್ಕಿ: ಇಮ್ಯಾಕುಲೆಟ್ ಕಾಂಸೆಪ್ಷನ್ ಚರ್ಚ್‌ನ ಐಸಿವೈಎಂ (ಇಂಡಿಯನ್ ಕ್ಯಾಥೋಲಿಕ್ ಯೂತ್ ಮೂವ್ಮೆಂಟ್) ಮತ್ತು ಕ್ಯಾಥೋಲಿಕ್ ಸಭಾ ಸದಸ್ಯರು ರಸ್ತೆ ಅಪಘಾತಗಳನ್ನು ತಡೆಗಟ್ಟಲು ರಸ್ತೆ ಉಬ್ಬುಗಳಿಗೆ, (ಹಂಪ್ಸ್ ಗಳಿಗೆ ) ಬಣ್ಣ ಹಚ್ಚುವ ಕಾರ್ಯವನ್ನು ಕೈಗೊಂಡಿದ್ದಾರೆ. ಈ ಉಪಕ್ರಮವು ವಾಹನ ಚಾಲಕರಿಗೆ ರಸ್ತೆ ಉಬ್ಬುಗಳು ಸ್ಪಷ್ಟವಾಗಿ ಗೋಚರಿಸುವಂತೆ ಸಹಾಯ ಮಾಡುವ ನಿಟ್ಟಿನಲ್ಲಿ ಹಾಗೂ ಅಪಘಾತಗಳು ತಪ್ಪಿಸಲು ನೆರವಾಗುತ್ತದೆ.
ಒಟ್ಟು 31 ರಸ್ತೆ ಉಬ್ಬುಗಳು,(ಹಂಪ್)ಗಳಿಗೆ ಬಣ್ಣ ಹಚ್ಚಲಾಯಿತು, ಇದರಿಂದ ರಾತ್ರಿ ಮತ್ತು ಕಡಿಮೆ ಬೆಳಕಿನ ಸಮಯದಲ್ಲಿ ರಸ್ತೆ ಸುರಕ್ಷತೆ ಹೆಚ್ಚುವ ಸಾಧ್ಯತೆ ಇದೆ. ಅಕ್ಟೋಬರ್ 31 ರಂದು 17 ಮಂದಿ ಸ್ವಯಂಸೇವಕರು ಸೇರಿ ಈ ಕೆಲಸವನ್ನು ಪೂರ್ಣಗೊಳಿಸಿದರು. ಇದರಿಂದ ಸ್ಥಳೀಯರು ಮತ್ತು ಪ್ರವಾಸಿಗರು ಪ್ರಯೋಜನವನ್ನು ಪಡೆಯಲಿದ್ದಾರೆ.
Icym ಸಂಘಟನೆಯ ಯುವಕರ ಕಾರ್ಯಶೈಲಿ, ರಸ್ತೆ ಸುರಕ್ಷತೆ ಜಾಗೃತಿ ಕಾರ್ಯವು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿರುವುದು, ಮಾತ್ರವಲ್ಲದೆ ಸಾರ್ವಜನಿಕರ ಸಹಕಾರ ಯುವಕರಲ್ಲಿ ಸಮಾಜಮುಖಿ ಚಿಂತನೆಗೆ ಇನ್ನಷ್ಟು ಪ್ರೇರಣೆ ದೊರಕಿದಂತಾಗಿದೆ.