Monday, July 15, 2024
Homeಉಡುಪಿಶ್ರೀ ಸಾಯಿ ಈಶ್ವರ್ ಗುರೂಜಿಯವರ ಹದಿನೆಂಟನೇ ದಿನದ ಪ್ರದಕ್ಷಿಣೆ

ಶ್ರೀ ಸಾಯಿ ಈಶ್ವರ್ ಗುರೂಜಿಯವರ ಹದಿನೆಂಟನೇ ದಿನದ ಪ್ರದಕ್ಷಿಣೆ

ಉಡುಪಿ : ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾ ಸಂಕಲ್ಪದಂತೆ 108 ದಿನ 108 ಕ್ಷೇತ್ರ ಪ್ರದಕ್ಷಿಣೆಯ ಹದಿನೆಂಟನೇ ದಿನದ ಪ್ರದಕ್ಷಿಣೆಗೆ ಜುಲೈ 01 ಸೋಮವಾರ ನೀಲಾವರ ಶ್ರೀ ಕ್ಷೇತ್ರ ಮಹಿಷಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕ ಚಂದ್ರಯ್ಯ ಅಡಿಗರಿಗೆ ಧರ್ಮ, ರಾಷ್ಟ್ರ, ಯೋಧರು ಹಾಗೂ ಅವರ ಕುಟುಂಬದ ರಕ್ಷಣೆ, ಗೋರಕ್ಷಣೆ, ಸನಾತನ ಧರ್ಮ ರಕ್ಷಣೆ ಮತ್ತು ಹಿಂದೂಗಳು ಮತಾಂತರವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರದಲ್ಲಿ ನಿತ್ಯ ಪೂಜೆಯ ಬಳಿಕ ವಿಶೇಷ ಪ್ರಾರ್ಥನೆ ಮಾಡುವಂತೆ ಮನವಿ ಸಲ್ಲಿಸಿ ಬಿಲ್ವಾ ಪತ್ರೆಯ ಗಿಡ ನೀಡಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ನೀಲಾವರ ಪಂಚಾಯತ್ ಉಪಾಧ್ಯಕ್ಷರಾದ ರಮೇಶ್ ಪೂಜಾರಿ, ಕೆ.ಆರ್ ಫಣಿರಾಜ್ , ರಾಘವೇಂದ್ರ ನಾಯಕ್, ಗಂಗಾಧರ್ ಹೆಗ್ಡೆ, ಪ್ರದೀಪ್, ಎನ್ .ಆರ್ ದಾಮೋದರ ಶರ್ಮ, ಗೀತಾಂಜಲಿ ಎಮ್.ಸುವರ್ಣ, ವೀಣಾ. ಎಸ್‌. ಶೆಟ್ಟಿ, ರವಿ ಶೆಟ್ಟಿ, ಮಾಲತಿ, ಸತೀಶ್ ದೇವಾಡಿಗ, ವಿಘ್ನೇಶ್ ನೀಲಾವರ, ರಾಜೇಶ್ ಜೋಗಿ, ಶಶಾಂಕ್, ನಿಲೇಶ್ ಹಾಗೂ ಅಭಿಮಾನಿ ಭಕ್ತರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular