ಶ್ರೀಲೋಕನಾಥೇಶ್ವರ ಭಜನಾ ಮಂಡಳಿ ಹಾಗೂ ಶ್ರೀದೇವಿ ಮಹಿಳಾ ಕೇಂದ್ರದ 25 ನೇ ವರ್ಷದ ಬೆಳ್ಳಿ ಹಬ್ಬದ ಪ್ರಯುಕ್ತ ಏಕಾಹ ಭಜನಾ ಕಾರ್ಯಕ್ರಮ ಮತ್ತು ಭಜನಾ ಕಮ್ಮಟೋತ್ಸವ ಇದರ ಆಮಂತ್ರಣವನ್ನು ಇಂದು (ಮಾ.29) ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು ದೇವಸ್ಥಾನದ ಪ್ರಧಾನ ಅರ್ಚಕರಾದ ಸೂರ್ಯನಾರಾಯಣ್ ರಾವ್ ಆಡಳಿತ ಮುಖ್ಯಸ್ಥರಾದ ಶ್ರೀಧರ್ ಪೂಜಾರಿ ಆಡಳಿತ ಸಮಿತಿಯ ಸದಸ್ಯರಾದ ಪ್ರಭಾಕರ ಮುಡ್ಜಲು ಭಜನಾ ಮಂಡಳಿಯ ಅಧ್ಯಕ್ಷರಾದ ಜಗನ್ನಾಥ್ ಕುಲಾಲ್ ಬೈರೊಟ್ಟು ಕಾರ್ಯದರ್ಶಿಯಾದ ಸದಾಶಿವ ಶಿವಗಿರಿ ಶ್ರೀದೇವಿ ಮಹಿಳಾ ಕೇಂದ್ರದ ಅಧ್ಯಕ್ಷರಾದ ವಿಜಯ ಶ್ರೀ ದುರ್ಗಾ ನಿವಾಸ ಶ್ರೀದೇವಿ ಮಹಿಳಾ ಕೇಂದ್ರದ ಸಂಚಾಲಕರು ಕಮಲಾಕ್ಷಿ ಎಸ್ ಎನ್ ,ಭಜನಾ ಮಂಡಳಿಯ ಸಂಚಾಲಕರು ಪ್ರಸಾದ್ ನಲ್ಲಾರಗುತ್ತು , ಭಜನಾ ಮಂಡಳಿಯ ಮಾಜಿ ಅಧ್ಯಕ್ಷರಾದ ಅಶೋಕ್ ಕುಮಾರ್ ಶೇಖರ ಶ್ರೀ ದುರ್ಗಾ ನಿವಾಸ ರಾಜೇಶ್ ಕುಲಾಲ್ ಬೈರೊಟ್ಟು ಸಚಿನ್ ಮಂತ್ಯೋಲ್ ಪ್ರಶಾಂತ್ ಮಡೆಮಾರು ಮತ್ತು ಕೊರಗಪ್ಪ ಮೂಲ್ಯ ಕೆಳಗಿನಮನೆ ಉಪಸ್ಥಿತರಿದ್ದರು.