Thursday, July 25, 2024
Homeನಿಧನಮನೆಮನೆ ಮತದಾನಕ್ಕೆ ಕೆಲವೇ ನಿಮಿಷಗಳಿರುವಾಗ ವೃದ್ಧೆ ಸಾವು

ಮನೆಮನೆ ಮತದಾನಕ್ಕೆ ಕೆಲವೇ ನಿಮಿಷಗಳಿರುವಾಗ ವೃದ್ಧೆ ಸಾವು

ಕೊಪ್ಪಳ: ಲೋಕಸಭಾ ಚುನಾವಣೆಯ ಮೂರನೇ ಹಂತದ ಭಾಗವಾಗಿ ಕೊಪ್ಪಳದಲ್ಲಿ ಮನೆಮನೆ ಮತದಾನ ಆರಂಭವಾಗಿದೆ. ಹೀಗೆ ಮತ ಚಲಾಯಿಸಲೆಂದು ವೃದ್ಧೆಯೊಬ್ಬರ ಮನೆಗೆ ಅಧಿಕಾರಿಗಳು ಭೇಟಿ ನೀಡುವುದಕ್ಕೆ ಕೊಂಚ ಮೊದಲು ಅವರು ಮೃತಪಟ್ಟಿದ್ದಾರೆ. ಮತ ಚಲಾಯಿಸುವ ತಮ್ಮ ಹಕ್ಕನ್ನು ಚಲಾಯಿಸಲೆಂದು ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದ 95ರ ಹರೆಯದ ಪಾರ್ವತಮ್ಮ ಸಜ್ಜನ ಹೆಸರು ನೋಂದಾಯಿಸಿಕೊಂಡಿದ್ದರು. ಅದೇ ಗ್ರಾಮದಲ್ಲಿ ಇನ್ನೊಬ್ಬ ಹಿರಿಯ ನಾಗರಿಕರಿಂದ ಮತ ಹಾಕಿಸಿಕೊಂಡು ಚುನಾವಣಾ ಸಿಬ್ಬಂದಿ ಪಾರ್ವತಮ್ಮ ಮನೆಗೆ ಬರುವವರಿದ್ದರು. ಸಿಬ್ಬಂದಿ ಮನೆಗೆ ಬರುವ ಕೆಲ ಹೊತ್ತಿನ ಮೊದಲು ವೃದ್ಧೆ ಕೊನೆಯುಸಿರೆಳೆದರು. ನಮ್ಮ ಅಜ್ಜಿಯ ಮತ ಹಾಕಿಸಿಕೊಳ್ಳಲು ಚುನಾವಣಾಧಿಕಾರಿಗಳು ಬರುತ್ತಾರೆಂದು ಟೇಬಲ್ ಜೋಡಿಸಿಟ್ಟಿದ್ದೆ. ಆದರೆ ಅದಕ್ಕೂ ಮೊದಲೇ ಅಜ್ಜಿ ಮೃತಪಟ್ಟಿದ್ದಾರೆ. ಮತದಾನ ಮಾಡುವ ಆಸೆಯಿದ್ದರೂ ಅದನ್ನು ಈಡೇರಿಸಲು ಸಾಧ್ಯವಾಗಲಿಲ್ಲ ಎಂದು ವೃದ್ಧೆಯ ಸಂಬಂಧಿ ಮುದಿಬಸಪ್ಪ ಸಜ್ಜನ ಹೇಳಿದರು.

RELATED ARTICLES
- Advertisment -
Google search engine

Most Popular