Saturday, April 26, 2025
Homeಸುಳ್ಯಕಾಯರ್ತೋಡಿ ಶ್ರೀ ನಿಧಿ ಮಹಿಳಾ ಮಂಡಳದ ನೂತನ ಪದಾಧಿಕಾರಿಗಳ ಆಯ್ಕೆ

ಕಾಯರ್ತೋಡಿ ಶ್ರೀ ನಿಧಿ ಮಹಿಳಾ ಮಂಡಳದ ನೂತನ ಪದಾಧಿಕಾರಿಗಳ ಆಯ್ಕೆ

ಕಾಯರ್ತೋಡಿ ಶ್ರೀ ನಿಧಿ ಮಹಿಳಾ ಮಂಡಳದ ಮಹಾಸಭೆ ಮಾ.16 ರಂದು ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ತೀರ್ಥರಾಮರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ, 2025-2026ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಧ್ಯಕ್ಷರಾಗಿ ಕಲಾವತಿ ತೀರ್ಥರಾಮ, ಅಧ್ಯಕ್ಷರಾಗಿ ಪ್ರಿಯಾ ಬಳ್ಳಡ್ಕ, ಕಾರ್ಯದರ್ಶಿಯಾಗಿ ಶ್ರುತಿ ಮಂಜುನಾಥ್, ಕೋಶಾಧಿಕಾರಿಯಾಗಿ ಜಯಮಾಲಾ ಶಿವಪ್ರಕಾಶ್, ಉಪಾಧ್ಯಕ್ಷರಾಗಿ ರಶ್ಮಿ ಉಪೇಂದ್ರ, ಜೊತೆ ಕಾರ್ಯದರ್ಶಿಯಾಗಿ ರತ್ನ ವೆಂಕಟೇಶ್, ಕ್ರೀಡಾ ಕಾರ್ಯದರ್ಶಿಯಾಗಿ ಜ್ಯೋತಿ ಹರೀಶ್ ಆಯ್ಕೆಯಾದರು. ಕಲಾವತಿ ತೀರ್ಥರಾಮರು ಸ್ವಾಗತಿಸಿ ಜ್ಯೋತಿ ಹರೀಶ್ ರವರು ವಂದಿಸಿದರು.

RELATED ARTICLES
- Advertisment -
Google search engine

Most Popular