ಉಡುಪಿ: ತೆಂಗಿನಕಾಯಿ ನಾರು ಸಾಗಿಸುತ್ತಿದ್ದ ಪಿಕ್‌ಅಪ್ ವಾಹನವೊಂದು ವಿದ್ಯುತ್ ತಂತಿ ತಗುಲಿ ಸುಟು ಭಸ್ಮವಾಗಿರುವ ಘಟನೆ ಹೊಡೆಯಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.
ಅಕ್ಬರ್ ಅಲಿ ಎಂಬವರಿಗೆ ಸೇರಿದ ಪಿಕ್‌ಅಪ್‌ನಲ್ಲಿ ತೆಂಗಿನಕಾಯಿ ನಾರನ್ನು ಸಾಗಿಸುತ್ತಿದ್ದಾಗ ರಸ್ತೆ ಬದಿಯ ವಿದ್ಯುತ್ ತಂತಿಗೆ ವಾಹನ ತಗುಲಿದೆ. ಈ ವೇಳೆ ಬೆಂಕಿ ಕಾಣಿಸಿಕೊಂಡು ತೆಂಗಿನ ನಾರಿಗೆ ತಗುಲಿದೆ. ಈ ಬೆಂಕಿ ವಾಹನಕ್ಕೆ ವ್ಯಾಪಿಸಿ ಹೊತ್ತಿ ಉರಿದಿದೆ. ತಕ್ಷಣ ಸ್ಥಳಕ್ಕೆ ಮಲ್ಪೆ ಅಗ್ನಿ ಶಾಮಕ ದಳ ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಘಟನೆಯಿಂದ ಸುಮಾರು ಒಂದುವರೆ ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೆ, ಮಲ್ಪೆ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.