ಶಿವಮೊಗ್ಗ: ಕಾಡಾನೆ ದಾಳಿಗೆ ರಿಪ್ಪನ್ ಪೇಟೆ ಬಳಿಯ ಅರಸಾಳು ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಅರಸಾಳು ಗ್ರಾಮದ ಬಸವಾಪುರ ನಿವಾಸಿ ತಿಮ್ಮಪ್ಪ ಮಡಿವಾಳ ಎಂಬವರು ಆನೆ ದಾಳಿಗೆ ಬಲಿಯಾದ ದುರ್ದೈವಿ.
ಬೆಳಿಗ್ಗೆ 7 ಗಂಟೆಗೆ 54ರ ಹರೆಯದ ತಿಮ್ಮಪ್ಪ ಕಾಡಿನಿಂದ ಬರುವಾಗ ಈ ಘಟನೆ ನಡೆದಿದೆ.
ಸ್ಥಳಕ್ಕೆ ವನ್ಯಜೀವಿ ವಿಭಾಗದ ಸಿಸಿಎಫ್ ಹನುಮಂತಪ್ಪ, ಡಿಎಫ್ ಒ ಪ್ರಸನ್ನ ಪಟಗಾರ, ಎಸಿಎಫ್ ಸುರೇಶ್, ಹಣಗೆರೆ ವಿಜಯ ಕುಮಾರ್, ಮುಗುಡ್ಡಿ ವನ್ಯಜೀವಿ ವಿಭಾಗದ ಆರ್ ಎಫ್ ಒ ಪವನ್ ಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮೃತನ ಮನೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ ನೀಡಿ, 1 ಲಕ್ಷ ರೂ. ಪರಿಹಾರ ನೀಡಿದರು.