ಸಕಲೇಶಪುರ: ಕಾಡಾನೆ ದಾಳಿಯಿಂದ ಇಲ್ಲಿನ ಹೆತ್ತೂರು ಹೋಬಳಿಯ ಯಡಕುಮಾರಿಯ ಮನೆಯೊಂದರ ಶೀಟ್ ಹಾಗೂ ಹೆಂಚು ಧ್ವಂಸಗೊಂಡಿದೆ. ಮಂಗಳವಾರ ಮುಂಜಾನೆ ಕಾಡಾನೆ ದಾಳಿ ನಡೆದಿದೆ.
ವೆಂಕಟೇಶ್ ಎಂಬವರ ಮನೆ ಮೇಲೆ ಕಾಡಾನೆಗಳು ದಾಳಿ ನಡೆಸಿವೆ. ಮನೆಯ ಪರಿಸರದಲ್ಲಿದ್ದ ಬಾಳೆಗಿಡಗಳನ್ನೂ ಆನೆಗಳು ನಾಶಪಡಿಸಿವೆ.
ಕಾಡಾನೆಗಳ ಗುಂಪು ಕಳೆದ ಕೆಲವು ದಿನಗಳಿಂದ ಗ್ರಾಮದಲ್ಲಿ ಬೀಡುಬಿಟ್ಟಿವೆ. ಗ್ರಾಮಸ್ಥರು ಆತಂಕದಲ್ಲಿ ಜೀವಿಸುವಂತಾಗಿದೆ.