Saturday, July 20, 2024
Homeರಾಷ್ಟ್ರೀಯಸುದ್ದಿ ವರದಿಗೆ ಹೋದವರ ಮೇಲೆ ಕಾಡಾನೆ ದಾಳಿ: ಕ್ಯಾಮೆರಾಮ್ಯಾನ್ ಬಲಿ

ಸುದ್ದಿ ವರದಿಗೆ ಹೋದವರ ಮೇಲೆ ಕಾಡಾನೆ ದಾಳಿ: ಕ್ಯಾಮೆರಾಮ್ಯಾನ್ ಬಲಿ

ಪಾಲಕ್ಕಾಡ್: ಕಾಡಾನೆ ದಾಳಿಯಿಂದ ಸುದ್ದಿ ವಾಹಿನಿಯೊಂದರ ಕ್ಯಾಮೆರಾಮ್ಯಾನ್ ಒಬ್ಬರು ಮೃತಪಟ್ಟ ಘಟನೆ ನಡೆದಿದೆ. ಕೇರಳದ ಮಾತೃಭೂಮಿ ಸುದ್ದಿ ವಾಹಿನಿಯ ಎ.ವಿ. ಮುಕೇಶ್ ಮೃತಪಟ್ಟವರು.

ಪಾಲಕ್ಕಾಡ್ ನ ಕೊಟ್ಟೇಕಾಡ್ ನಲ್ಲಿ ಕಾಡಾನೆಗಳ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಈ ಸ್ಥಳವು ಕಾಡು ಪ್ರಾಣಿಗಳ ದಾಳಿಗೆ ಈಗಾಗಲೇ ಕುಖ್ಯಾತಿ ಪಡೆದಿದೆ.

ಮಾತೃಭೂಮಿ ನ್ಯೂಸ್ ಸಿಬ್ಬಂದಿ ಮುಕೇಶ್ ಕೊಟ್ಟೇಕಾಡ್ ನಲ್ಲಿ ಕಾಡಾನೆ ಹಿಂಡಿನ ಚಲನವಲನದ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದಾಗ ಕಾಡಾನೆ ದಾಳಿ ಮಾಡಿದೆ. ಮುಕೇಶ್ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಅವರು ಆಯತಪ್ಪಿ ಬಿದ್ದುದರಿಂದ ಆನೆ ಅವರ ಮೇಲೆ ದಾಳಿ ಮಾಡಿದೆ. ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.

ವರದಿಗಾರ, ಚಾಲಕ ಕಾಡಾನೆ ದಾಳಿಯಿಂದ ಪಾರಾಗಿದ್ದಾರೆ. ದೆಹಲಿ ಬ್ಯೋರೋದಲ್ಲಿ ಕೆಲವು ವರ್ಷ ಮಾಡಿದ್ದ ಮುಕೇಶ್ ಕಳೆದ ವರ್ಷವಷ್ಟೇ ಪಾಲಕ್ಕಾಡ್ ಬ್ಯೂರೊಗೆ ವರ್ಗಾವಣೆಯಾಗಿದ್ದರು.

RELATED ARTICLES
- Advertisment -
Google search engine

Most Popular