Sunday, July 21, 2024
Homeರಾಜ್ಯಕೆರೆಯಲ್ಲಿ ಮಲಗಿ ವಿಶ್ರಾಂತಿಯಲ್ಲಿದ್ದ ಹುಲಿಯನ್ನು ಅಟ್ಟಾಡಿಸಿ ಓಡಿಸಿದ ಗಜರಾಜ!

ಕೆರೆಯಲ್ಲಿ ಮಲಗಿ ವಿಶ್ರಾಂತಿಯಲ್ಲಿದ್ದ ಹುಲಿಯನ್ನು ಅಟ್ಟಾಡಿಸಿ ಓಡಿಸಿದ ಗಜರಾಜ!

ಗುಂಡ್ಲುಪೇಟೆ: ಸಾಮಾನ್ಯವಾಗಿ ಸಿನೆಮಾ, ನಾಟಕಗಳಲ್ಲಿ ಒಂದು ಡೈಲಾಗ್‌ ಕೇಳುತ್ತಿರುತ್ತೇವೆ. ಮಲಗಿದ್ದ ಹುಲಿಯನ್ನು ಕೆಣಕ್ಕೀದ್ದೀಯಾ… ಇದು ಬಹುತೇಕ ವಿಲನ್‌ಗಳ ಡೈಲಾಗ್‌! ಆದರೆ ಇಲ್ಲಿ ನಿಜವಾಗಿಯೂ ಮಲಗಿದ್ದ ಹುಲಿಯನ್ನು ಕೆಣಕಿದ ಗಜರಾಜನಿಗೆ ಭಯಬಿದ್ದು, ಹುಲಿ ಓಡಿರುವ ಘಟನೆ ನಡೆದಿದೆ. ಕೆರೆ ಬದಿಯಲ್ಲಿ ರಿಲಾಕ್ಸ್‌ ಮೂಡ್‌ನಲ್ಲಿದ್ದ ಹುಲಿಯನ್ನು ಎಬ್ಬಿಸಿ ಆನೆಯೊಂದು ಅಟ್ಟಾಡಿಸಿ, ಓಡಿಸಿದ ಘಟನೆ ಬಂಡೀಪುರ ಅಭಯಾರಣ್ಯ ಪ್ರದೇಶದಲ್ಲಿ ನಡೆದಿದೆ.
ಹುಲಿ ತನ್ನ ಮೇಲೆ ದಾಳಿ ಮಾಡಬಹುದೆಂದು ಶಂಕಿಸಿ ಆನೆ ಹುಲಿಯನ್ನು ಓಡಿಸಿದೆ. ಆನೆ ತನ್ನ ಮೇಲೆ ದಾಳಿ ಮಾಡಬಹುದೆಂದು ಹೆದರಿ ಹುಲಿ ಓಡಿದೆ. ಆನೆ ಹೋದ ಬಳಿಕ ಹುಲಿ ಮತ್ತೆ ಅಲ್ಲಿಗೆ ಬಂದು ಮಲಗಿದೆ. ಪ್ರವಾಸಿಗರೊಬ್ಬರು ಈ ದೃಶ್ಯಾವಳಿಯನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಈಗ ಸಾಕಷ್ಟು ವೈರಲ್‌ ಆಗಿದೆ.

RELATED ARTICLES
- Advertisment -
Google search engine

Most Popular