ಮಂಗಳೂರು: ಕುಡಿತದ ಅಮಲಿನಲ್ಲಿದ್ದ ವ್ಯಕ್ತಿಯನ್ನು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆನೆ ಯಶಸ್ವಿನಿ ಎತ್ತಿ ಬಿಸಾಡಿದ ಘಟನೆ ನಡೆದಿದೆ. ಪೊಲೀಸರು ಆನೆಯೊಂದಿಗೆ ಫೋಟೊ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಕುಡಿತದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಆನೆಯ ಎದುರು ಸಾಗಿದ್ದ. ವ್ಯಕ್ತಿಯನ್ನು ನೋಡಿದ ಕೂಡಲೇ ತನ್ನ ಸೊಂಡಿಲಿನಿಂದ ಎತ್ತಿ ಎಸೆದಿದೆ.
ಎಸೆದ ರಭಸಕ್ಕೆ ವ್ಯಕ್ತಿ ನೆಲಕ್ಕಪ್ಪಳಿಸಿದ್ದಾನೆ. ಆದರೆ ಯಾವುದೇ ಗಾಯಗಳಾಗಿಲ್ಲ. ಕುಡಿತದ ಅಮಲಿನಲ್ಲಿದ್ದ ವ್ಯಕ್ತಿ ತೂರಾಡಿಕೊಂಡು ಬಂದಿದ್ದರಿಂದಲೇ ಆನೆ ಕೋಪಗೊಂಡು ಎತ್ತಿ ಎಸೆದಿದೆ ಎನ್ನಲಾಗಿದೆ.