ಅಜೆಕಾರು : ಇರ್ವತ್ತೂರು ಶ್ರೀ ಲಕ್ಷ್ಮೀಜನಾರ್ದನ ಸ್ವಾಮಿ ದೇವಸ್ಥಾನ ಎಳ್ಳಾರೆ ಇದರ ವಾರ್ಷಿಕ ಜಾತ್ರೆಯು ಪ್ರಾರಂಭವಾಗಿದ್ದು ಎ.18ರ ವರೆಗೆ ನಡೆಯಲಿದೆ.ಎ.11 ರಂದು ಹೊರೆಕಾಣಿಕೆ, ಎ.12 ರಂದು ಧ್ವಜಾರೋಹಣ, ಎ.13ರಂದು ಸಣ್ಣ ರಥೋತ್ಸವ, ಕೆರೆದೀಪ, ಎ.14 ರಂದು ಕಲಶಾಭಿಷೇಕ, ಕಟ್ಟೆ ಪೂಜೆ, ಎ.15ರಂದು ಶ್ರೀ ಮನ್ಮಹಾರಥೋತ್ಸವ, ಧಾರ್ಮಿಕ ಸಭೆ, ಎ.16 ರಂದು ದೈವಗಳ ನೇಮ, ಎ.17 ರಂದು ಚಂದ್ರಮಂಡಲ ರಥೋತ್ಸವ, ಎ.18 ರಂದು ಸಂಪ್ರೋಕ್ಷಣೆ ನಡೆಯಲಿದೆ.