ಕಾಪು : ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ಉಪಸ್ಥಾನ ಸನ್ನಿಧಿ ಶ್ರೀ ಭಾಗೀರಥಿ ಅಮ್ಮನವರ ಗುಡಿ ನಿರ್ಮಾಣ ಕಾರ್ಯಕ್ಕೆ ಸೀಮೆಯ ಭಗವದ್ಭಕ್ತರ ಉಪಸ್ಥಿತಿಯಲ್ಲಿ ಶಿಲಾನ್ಯಾಸ ನಡೆಯಿತು. ಕ್ಷೇತ್ರದ ತಂತ್ರಿ ವೇ। ಮೂ। ಬೆಟ್ಟಿಗೆ ವೆಂಕಟರಾಜ ತಂತ್ರಿ, ಅರ್ಚಕ ವೇ। ಮೂ|ಗುರುರಾಜ ಭಟ್ ಅವರ ನೇತೃತ್ವದಲ್ಲಿ ಶಿಲಾನ್ಯಾಸ ಪೂರ್ವಕ ಧಾರ್ಮಿಕ ವಿಧಿ ವಿಧಾನ ನೆರವೇರಿಸಲಾಯಿತು. ಶ್ರೀ ವಿಶ್ವೇಶ್ವರ ದೇವಸ್ಥಾನದ ಪವಿತ್ರಪಾಣಿ ಸತೀಶ್ ಕುಂಡಂತಾಯ, ಮಾಜಿ ಆಡಳಿತ ಮೊಕ್ತೇಸರರಾದ ವೈ. ಪ್ರಫುಲ್ಲ ಶೆಟ್ಟಿ ಎಲ್ಲೂರುಗುತ್ತು, ಅರುಣಾಕರ ಶೆಟ್ಟಿ ಕಳತ್ತೂರು, ಶ್ರೀ ಭಾಗೀರಥಿ ಅಮ್ಮನವರ ಗುಡಿಯ ದಾನಿ ಹರಿಜೀವನ್ ಶೆಟ್ಟಿ ಕಾಪು, ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಆಡಳಿತ ಮೊಕ್ತೇಸರ ನಡಿಮನೆ ದೇವರಾಜ ರಾವ್, ಪ್ರಮುಖರಾದ ಕಿಶನ್ ರಾವ್ ಎಲ್ಲೂರು, ರವಿರಾಜ ರಾವ್, ಪ್ರಶಾಂತ್ ಶೆಟ್ಟಿ ಜೆನ್ನಿ ನರಸಿಂಹ ಭಟ್, ಅನಂತಪದ್ಮನಾಭ ಜೆನ್ನಿ ಕೆ. ಕೊರಗ, ಎಲ್ಲೂರು ಸೀಮೆಯ ಸ್ಥಳವಂದಿಗರು, ಸೀಮೆಯ ಭಕ್ತರು ಉಪಸ್ಥಿತರಿದ್ದರು.