ಮಲ್ಪೆ,: ಮೀನುಗಾರರ ಆರಾಧ್ಯ ದೈವ ಕಲ್ಮಾಡಿ ಪಾದೆ ಬೊಬ್ಬರ್ಯ ಮತ್ತು ಪರಿವಾರ ದೈವಗಳಿಗೆ ಮಲ್ಪೆ ಏಳೂರು ಮೊಗವೀರ ಮಹಾಜನ ಸಂಘದ ವತಿಯಿಂದ ಸಿರಿ ಸಿಂಗಾರದ ನೇಮವು ಮಾ. 28ರಂದು ನಡೆಯಲಿದೆ.
ಅಂದು ಸಂಜೆ 7ರಿಂದ ಅನ್ನಸಂತರ್ಪಣೆ, ಏಳೂರು ಮೊಗವೀರ ಭಜನ ಮಂದಿರದಿಂದ ಭಜನ ಕಾರ್ಯಕ್ರಮ, ರಾತ್ರಿ 8ರಿಂದ ಬೊಬ್ಬರ್ಯ ಮತ್ತು ಬಂಟ ದೈವದ ನೇಮ, ರಾತ್ರಿ 10.30ರಿಂದ ಬೊಬ್ಬರ್ಯ ದೈವದ ದರ್ಶನ ಹಾಗೂ ರಾತ್ರಿ 12ರಿಂದ ಕೊರಗಜ್ಜ ದೈವದ ನೇಮವು ನಡೆದು ಬಳಿಕ ಪ್ರಸಾದ ವಿತರಣೆಯಾಗಲಿದೆ ಎಂದು ಏಳೂರು ಮೊಗವೀರ ಮಹಾಜನ ಸಂಘದ ಅಧ್ಯಕ್ಷ ರತ್ನಾಕರ ಸಾಲ್ಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.