ಬಂಟ್ವಾಳ: ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ರವರ ನಿಧನದ ಪ್ರಯುಕ್ತ ಏಳು ದಿನಗಳ ಶೋಕಾಚರಣೆಯನ್ನು ಕೈಗೊಳ್ಳಲು ಸರಕಾರವು ಆದೇಶಿಸಿದ ಕಾರಣ ನಾಳೆ ಡಿ. 28ರಂದು ಬಂಟ್ವಾಳ ತಾಲೂಕಿನ ಏಮಾಜೆ ಕಿರಿಯ ಪ್ರಾಥಮಿಕ ಶಾಲಾಯ ನಿಗದಿಯಾಗಿದ್ದ ಶಾಲಾ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಜನವರಿ 5ಕ್ಕೆ ಮುಂದೂಡಲಾಗಿದೆ.
ಪೂರ್ವ ನಿಗದಿಪಡಿಸಿದ ಕಾರ್ಯಕ್ರಮದಂತೆ ಅಂದು ಎಲ್ಲಾ ಕಾರ್ಯಕ್ರಮಗಳು ಜರಗಲಿರುವುದು, ಅದರಂತೆ ಬದಲಾದ ದಿನಾಂಕವನ್ನು ಎಲ್ಲರೂ ಗಮನಿಸಿ ಪ್ರತಿಭಾ ಪುರಸ್ಕಾರವನ್ನು ಯಶಸ್ವಿಗೊಳಿಸುವಲ್ಲಿ ಸಹಕರಿಸಬೇಕಾಗಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಡಾ. ತ್ರಿವೇಣಿ ರಮೇಶ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಏಮಾಜೆ ಶಾಲಾ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜನವರಿ 5ಕ್ಕೆ ಮುಂದೂಡಿಕೆ
RELATED ARTICLES