Saturday, July 20, 2024
Homeಮಂಗಳೂರುಖ್ಯಾತ ಪತ್ರಿಕೋದ್ಯಮಿ ಮತ್ತು ಕೈಗಾರಿಕೋದ್ಯಮಿ ದಿ| ವಿ.ಎಸ್. ಕುಡ್ವರ ಜನ್ಮ ದಿನಾಚರಣೆ

ಖ್ಯಾತ ಪತ್ರಿಕೋದ್ಯಮಿ ಮತ್ತು ಕೈಗಾರಿಕೋದ್ಯಮಿ ದಿ| ವಿ.ಎಸ್. ಕುಡ್ವರ ಜನ್ಮ ದಿನಾಚರಣೆ

ಮಂಗಳೂರು: ಖ್ಯಾತ ಪತ್ರಿಕೋದ್ಯಮಿ ನವಭಾರತ ಕನ್ನಡ ದೈನಿಕ ಪತ್ರಿಕೆಯ ಸ್ಥಾಪನಾ ಸಂಪಾದಕ ಮತ್ತು ನಗರದ ಕೆನರಾ ವರ್ಕ್ಸ್ಶಾಪ್ ಸಂಸ್ಥೆಯ ಸ್ಥಾಪನಾಧ್ಯಕ್ಷ ದಿ|ವಿ.ಎಸ್. ಕುಡ್ವರ 125ವಾರ್ಷಿಕ ಜನ್ಮ ದಿನಾಚರಣೆ (ಸಂಸ್ಥಾಪಕರ ದಿನಾಚರಣೆ) ಯನ್ನು ತಾ.೦9.೦6.2024 ರಂದು ಅವರು ಸ್ಥಾಪಿಸಿದ ಕೆನರಾ ವರ್ಕ್ ಶಾಪ್ ಸಂಸ್ಥೆಯ ಕೈಗಾರಿಕ ಸಂಕೀರ್ಣದಲ್ಲಿ ಸಂಸ್ಥೆಯ ಅಧ್ಯಕ್ಷ ಮತ್ತು ಆಡಳಿಕ ನಿರ್ದೇಶಕ ಪ್ರೇಮನಾಥ ಕುಡ್ವರ ಅಧ್ಯಕ್ಷತೆಯಲ್ಲಿ ಜರಗಿತು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸ್ಥಾಪಕರ ಆಡಳಿತ ಕ್ಷಮತೆ, ಕಾರ್ಯದಕ್ಷತೆ , ಕಾರ್ಯನಿರ್ವಹಣೆ, ಕರ್ತವ್ಯ ನಿಷ್ಠೆ ಮತ್ತು ಸಮಯ ಪಾಲನೆ ಮತ್ತು ಪತ್ರಿಕೋದ್ಯಮ (ನವಭಾರತ ಕನ್ನಡ ದೈನಿಕ ಪತ್ರಿಕೆ ) ಮತ್ತು ಕೈಗಾರಿಕೋದ್ಯಮ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆಯನ್ನು ಸ್ಮರಿಸಿದರು. ಅವರ ದೂರದರ್ಶಿತ್ವ , ಸ್ಛೂರ್ತಿ, ನಮ್ಮ ಸಂಸ್ಥೆಗೆ ಇಂದಿಗೂ ಮಾರ್ಗದರ್ಶನ ಹಾಗೂ ನಮ್ಮ ಸಂಸ್ಥೆಯ ಸಿಬ್ಬಂದಿಗಳಿಗೆ ದಾರಿದೀಪವಾಗಿದೆ ಎಂದು ನುಡಿದು ದಿ|ಕುಡ್ವರ ಪುತ್ಥಳಿಗೆ ಹಾರಾರ್ಪಣೆ ಮಾಡಿ ಸಂಸ್ಥಾಪಕರಿಗೆ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ನಿವೃತ್ತ ಉಪಮಹಾಪ್ರಬಂಧಕರಾದ ಅಬ್ದುಲ್ ಸಲೀಂರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸಂಸ್ಥಾಪಕರ ಕೈಗಾರಿಕೋದ್ಯಮದಲ್ಲಿ ಯೋಜನೆ, ಧ್ಯೇಯ ಮತ್ತು ದೂರದರ್ಶಿತ್ವದ ವಿವರ ನೀಡಿ ಉದ್ಯಮದಲ್ಲಿ ಯಶಸ್ಸು ಸಾಧಿಸಿದನ್ನು ಸ್ಮರಿಸಿದರು. ವಿ.ಎಸ್. ಕುಡ್ವರ ಜೀವನ ಚರಿತ್ರೆ ಕೃತಿಯ ಲೇಖನ ವಸಂತ ಮಲ್ಯರು ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದರು. ಸಿಬ್ಬಂದಿಗಳ ಪರವಾಗಿ ಹಿರಿಯ ಸಿಬ್ಬಂದಿಗಳಾದ ಸೀತರಾಮ್,
ಕಾರ್ಮಿಕರ ಸಂಘದ ಪರವಾಗಿ ಮತ್ತು ಸಂಸ್ಥಾಪಕರ ಪುತ್ಥಳಿಗೆ ಹಾರಾರ್ಪಣೆ ಮಾಡಿ ತಮ್ಮ ಗೌರವ ಸಲ್ಲಿಸಿದರು.
ಸಂಸ್ಥೆಯ ಮಹಾಪ್ರಬಂಧಕರಾದ ರವಿಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಮಹಿಳಾ ಅಧಿಕಾರಿ ಕಿರಣ ಸ್ವಾಗತಿಸಿದರು.

RELATED ARTICLES
- Advertisment -
Google search engine

Most Popular