ಉಡುಪಿ -ಕಾಸರಗೋಡು 400 KV ವಿದ್ಯುತ್ ಮಾರ್ಗ ಕಾಮಗಾರಿ ನಡೆಸಲು UKTL -STERLITE ಕಂಪನಿಯವರು ಈ ದಿನ ಮತ್ತೆ ನಿಡ್ಡೋಡಿ ಮಂಜನಬೈಲು ಪ್ರದೇಶದ ಖಾಸಗಿ ಜಾಗಕ್ಕೆ ಮಂಗಳೂರಿನಿಂದ ಕರೆದುಕೊಂಡು ಬಂದ ಪೊಲೀಸ್ ಸಿಬ್ಬಂದಿಯೊಂದಿಗೆ ಅತಿಕ್ರಮಣ ಪ್ರವೇಶ ಮಾಡಿದ್ದರು,. ಇದನ್ನು ಪ್ರಶ್ನಿಸಿ ವಿರೋಧ ವ್ಯಕ್ತಪಡಿಸಿದ ಭೂಮಾಲಕರು ಮತ್ತು ಸ್ಥಳೀಯ ಜನರೊಂದಿಗೆ ಅಮಾನವೀಯ ರೀತಿಯಲ್ಲಿ ವರ್ತಿಸಿದ ಕಂಪನಿಯವರನ್ನು ಕಾಮಗಾರಿ ನಡೆಸದಂತೆ ತಡೆಯಲಾಯಿತು.
ಈ ಸಂದರ್ಭದಲ್ಲಿ ಮೂಡಬಿದ್ರೆ ಪೊಲೀಸ್ ವೃತ್ತ ನಿರೀಕ್ಷಿಕರು ಸ್ಥಳಕ್ಕೆ ಆಗಮಿಸಿ ಕಂಪನಿಯವರಿಗೆ ಕಾನೂನು ರೀತ್ಯಾ ಮುಂದುವರಿಯುವಂತೆ ಎಚ್ಚರಿಕೆ ಕೊಟ್ಟರು. ಕೊನೆಗೆ ಮೂಡಬಿದ್ರೆ ತಹಸೀಲ್ದಾರ್ ಸ್ಥಳಕ್ಕೆ ಬಂದು ಭೂಮಾಲಕರು ಮತ್ತು ಕಂಪನಿಯವರ ಜೊತೆ ಮಾತುಕತೆ ನಡೆಸಿ, ಕಾಮಗಾರಿ ನಿಲ್ಲುಸುವಂತೆ ಕಂಪನಿಯವರಿಗೆ ಆದೇಶ ನೀಡಿ, ಕೂಡಲೇ ಸರ್ವೇ ಕಾರ್ಯ ಅಗತ್ಯ ಇರುವ ಪ್ರದೇಶದ ಎಲ್ಲಾ ಭೂಮಾಲಕರಿಗೂ ಪ್ರಾಥಮಿಕ ಮಾಹಿತಿ ನೋಟೀಸ್ ನೀಡಿ, ಭೂಮಾಲಕರು, ಕಂದಾಯ ಇಲಾಖೆ ಸಿಬ್ಬಂದಿ ಜೊತೆಯಾಗಿ ಸರ್ವೇ ಕೆಲಸ ಮಾತ್ರ ಮಾಡಲು ತಿಳಿಸಿ, ಭೂಮಾಲಕರ ಸಹಕಾರ ಬಯಸಿದರು. ನಿಡ್ಡೋಡಿ -ಮಂಜನಬೈಲು ವ್ಯಾಪ್ತಿಯ 3ಕಿ. ಮೀ ವ್ಯಾಪ್ತಿಯಲ್ಲಿ ಸರ್ವೇಗೆ ಉಳಿದಿರುವ ಪ್ರದೇಶದಲ್ಲಿ ಸರ್ವೇ ನಡೆಸಲು ಮಾತ್ರ ನಮ್ಮ ಒಪ್ಪಿಗೆ ಹೊರತು ಯೋಜನೆ ಅನುಷ್ಠಾನಕ್ಕೆ ಅಲ್ಲ ಎನ್ನುವುದನ್ನು ಸ್ಪಷ್ಟವಾಗಿ ಭೂಮಾಲಕರು ಮತ್ತು ಹೋರಾಟ ಸಮಿತಿ ಪದಾಧಿಕಾರಿಗಳು ತಹಸೀಲ್ದಾರ್ ಗೆ ತಿಳಿಸಲಾಯಿತು