ಮಂಗಳೂರು : “ಭಾರತ ರತ್ನ ದಿ| ಸರ್. ಎಂ. ವಿಶ್ವೇಶ್ವರಯ್ಯರವರು ಒಬ್ಬ ಮೇಧಾವಿ, ಅನುಭವಿ ಖ್ಯಾತ‌ ಇಂಜಿನಿಯರ್, ಅವರ ಪ್ರಾಮಾಣಿಕತೆ, ವೃತ್ತಿಕೌಶಲ್ಯ, ನಿಸ್ವಾರ್ಥ, ಸೇವಾ ಮನೋಭಾವ ಅಪ್ರತಿಮ ಪ್ರತಿಭೆ ಸಾಧನೆ ದೇಶದ ಎಲ್ಲಾ ಇಂಜಿನಿಯರ್‌ಗಳಿಗೆ ಮಾದರಿ ತಮ್ಮ ವಿಶಿಷ್ಟ ಕಾರ್ಯಪ್ರವೃತೆಯ ಮೂಲಕ ಇಂಜಿನಿಯರ್‌ಗಳ ಶಕ್ತಿ ಸಾಮರ್ಥ್ಯಕೌಶಲ್ಯ ಎಂಬುದನ್ನು ದೇಶಕ್ಕೆ ನಿದರ್ಶನ ನೀಡಿದ ವಿಶ್ವ ಮನ್ನಣೆ ಪಡೆದ ಮಹಾನ್ ವ್ಯಕ್ತಿ”ಎಂದು ದಕ್ಷಿಣಕನ್ನಡ ಜಿಲ್ಲಾ ನಿರ್ಮಿತಿ ಕೇಂದ್ರದ ಕಾರ್ಯ ನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಕಲ್ಬಾವಿಯವರು ಅಭಿಪ್ರಾಯ ವ್ಯಕ್ತಪಡಿಸಿದಾರೆ. ಅವರು ರೋಟರಿ ಮಂಗಳೂರ ಸಿಟಿ ಸಂಸ್ಥೆಯ ವೃತ್ತಿಪರ ಸೇವಾ ಯೋಜನೆಯ ಅಂಗವಾಗಿ ತಾ.೨೧.೦೯.೨೦೨೨ ನಗರದ ಹೋಟೇಲ್‌ ಉತ್ಸವ್ ಸಭಾಂಗಣದಲ್ಲಿ ಆಯೋಜಿಸಿದ ಇಂಜಿನಿಯರ್ಸ್ ದಿನಾಚರಣೆಯಲ್ಲಿ ಮುಖ್ಯ‌ ಅತಿಥಿಯಾಗಿ ಪಾಲ್ಗೊಂಡು ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು. ಅವರ ಕರ್ತವ್ಯ ಮತ್ತು ಸಮಯ ಪ್ರಜ್ಞೆ ಆಡಳಿತ ಕ್ಷಮತೆ ಇಂದಿನ ಇಂಜಿನಿರ‍್ಸ್ಗಳಿಗೆ ದಾರಿದೀಪ ಎಂದು ನುಡಿದರು.
ಈ ಸಂದರ್ಭದಲ್ಲಿ ಕೊಲ್ಕತ್ತಾ ನಗರ ಮೂಲದ ಟ್ರಾಕ್ಟ್ಬೆಲ್ ಸಂಸ್ಥೆಯ ತಾಂತ್ರಿಕ ತಜ್ಞರಾಗಿ ಮಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ಇಂಜಿನಿಯರ್‌ ಎಚ್.ಎಂ. ಲಿಂಗಪ್ಪರವರು ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆ ಮತ್ತು ವೃತ್ತಿಕ್ಷೇತ್ರದಲ್ಲಿ ಸಾಧಿಸಿದ ಅಮೂಲ್ಯ ಸಾಧನೆಗಳನ್ನು ಪರಿಗಣಿಸಿ ರೋಟರಿ ವೃತ್ತಿಪರ ಸೇವಾ ಪ್ರಶಸ್ತಿಯನ್ನು ಗೌರವಿಸಿ ಪ್ರಧಾನ ಮಾಡಿ ಅಭಿನಂದಿಸಲಾಯಿತು. ಪ್ರಶಸ್ತಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು ಪ್ರಶಸ್ತಿ ಸ್ವೀಕರಿಸಿದ ಬಳಿಕ ಇನ್ನು ಹೆಚ್ಚು ಸಾಧಿಸಲು ಪ್ರೇರಣೆಯಾಗಿದೆ ಎಂದು ನುಡಿದು ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ಸಂಸ್ಥೆಯ ಅಧ್ಯಕ್ಷರಾದರೋ ಬಸವಕುಮಾರ್ ಸ್ವಾಗತಿಸಿ ಪ್ರಶಸ್ತಿ ವಿಜೇತರ ಪರಿಚಯ ಮತ್ತು ಸಾಧನೆಯ ವಿವರ ನೀಡಿದರು. ಕಾರ್ಯದರ್ಶಿ ರೋ| ಪ್ರಶಾಂತ್‌ರೈ ಮಾಸಿಕ ವರದಿ ಮಂಡಿಸಿದರು.ರೋ| ಶ್ರೀನಾಥ್ ವಂದಿಸಿದರು.ವೇದಿಕೆಯಲ್ಲಿ ಆಡಳಿತ ಸಮಿತಿಯ ಸದಸ್ಯರಾದ ಸ್ಥಾಪನಾಧ್ಯಕ್ಷರೋ| ಡಾ| ರಂಜನ್, ಮಾಜಿಅಧ್ಯಕ್ಷರಾದರೋ|ಕಾನ್ಯುಟ್ ಪಿಂಟೋ, ರೋ|ಡಾ| ಅನಿಲ್ ಕುಮಾರ್, ರೋ| ಷರಿಪ್ ಹಸನ್ ಮÊೊದಿನ್, ರೋ| ಸುಧೀರ್‌ಕಾಮತ್ ಉಪಸ್ಥಿತರಿದ್ದರು.

Leave a Reply

Your email address will not be published.