Thursday, September 12, 2024
Homeಮಂಗಳೂರುಸಮವಸ್ತ್ರದ ಘನತೆಯನ್ನು ಹೆಚ್ಚಿಸಿ : ಶ್ರೀ ರಿಷ್ಯಂತ್ IPS

ಸಮವಸ್ತ್ರದ ಘನತೆಯನ್ನು ಹೆಚ್ಚಿಸಿ : ಶ್ರೀ ರಿಷ್ಯಂತ್ IPS


ಗೃಹರಕ್ಷಕರ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭ ದಿನಾಂಕ 01-03-2024 ರಿಂದ 10-03-2024 ರವರೆಗೆ ನಡೆದ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ : 10-03-2024 ರಂದು ಅಪರಾಹ್ನ 12.00 ಗಂಟೆಗೆ ಜಿಲ್ಲಾ ಗೃಹರಕ್ಷಕ ದಳ ಕಛೇರಿ, ಮೇರಿಹಿಲ್, ಮಂಗಳೂರು ಇಲ್ಲಿ ನಡೆಯಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀ ಸಿ.ಬಿ. ರಿಷ್ಯಂತ್, ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇವರು ಆಗಮಿಸಿ ಮಾತನಾಡಿ, ಗೃಹರಕ್ಷಕದಳದಲ್ಲಿ ಕರ್ತವ್ಯ ನಿರ್ವಹಣೆ ಅತ್ಯಂತ ಗೌರವಯುತವಾದಂತದ್ದು ಮತ್ತು ಪವಿತ್ರವಾದದ್ದಾಗಿರುತ್ತದೆ. ಖಾಕಿ ಸಮವಸ್ತ್ರಧಾರಿಗಳಾದ ಗೃಹರಕ್ಷಕರು ಸಮಾಜದಲ್ಲಿ ಗೌರವಯುತವಾಗಿ ನಡೆದುಕೊಂಡು ಸಮಾಜಸೇವೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ಕೊರೋನಾದಂತಹ ಸಂದರ್ಭದಲ್ಲಿ ಅನನ್ಯ ಸೇವೆಸಲ್ಲಿಸಿದ ಗೃಹರಕ್ಷಕರಿಗೆ ಅಭಿನಂದನೆ ಸಲ್ಲಿಸಿದರು. ಇಲ್ಲಿ ಪಡೆದಂತಹ ತರಬೇತಿಯನ್ನು ನೀವು ನಿಮ್ಮ ಮುಂದಿನ ಜೀವನದಲ್ಲಿ ಅಳವಡಿಸಿಕೊಂಡು ಸದಾಕಾಲ ಖಾಕಿಯ ಗೌರವಕ್ಕೆ ಯಾವುದೇ ರೀತಿಯಲ್ಲಿ ಚ್ಯುತಿಬಾರದಂತೆ ನೀವು ನಿಮ್ಮ ಕರ್ತವ್ಯವನ್ನು ನಿರ್ವಹಿಸಿಕೊಳ್ಳಿ ಎಂದು ಗೃಹರಕ್ಷಕರಿಗೆ ಹಾರೈಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿ, ಈ ದಿನ ನಿಮಗೆಲ್ಲ ವಿಶೇಷವಾದದ್ದು, ನಿಮ್ಮ ಜೀವನದಲ್ಲಿ ನೀವು ಗೃಹರಕ್ಷಕರಾಗಿ ನೊಂದಾವಣೆ ಮಾಡಿದ ಬಳಿಕ ನಿಮಗೆ ಈ ರೀತಿಯ 10 ದಿನಗಳ ಮೂಲ ತರಬೇತಿ ಶಿಬಿರ ನೀಡಲಾಗುತ್ತದೆ. ನಿಮಗೆ ಒಬ್ಬ ಮಾದರಿ ಗೃಹರಕ್ಷಕನಾಗಲು ಬೇಕಾದ ಎಲ್ಲಾ ರೀತಿಯ ತರಬೇತಿಯನ್ನು ನೀಡಿರುತ್ತೇವೆ. ಎಲ್ಲಾ ಇಲಾಖೆಯಲ್ಲಿದ್ದುಕೊಂಡು ಇಲಾಖೆಯ ಬಗ್ಗೆ ಮಾಹಿತಿ ಮತ್ತು ವಿಚಾರದ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ. ಗೃಹರಕ್ಷಕರಿಗೆ ಪ್ರಥಮ ಚಿಕಿತ್ಸೆ ಹಾಗೂ ಹೃದಯ ಪುನಚ್ಛೇತನ ಶಿಬಿರ ನೀಡಿ ಗೃಹರಕ್ಷಕರು ಈಗ ಜೀವರಕ್ಷಕರೂ ಆಗಿರುತ್ತಾರೆ. ನಿಮಗೆ ಜೀವವನ್ನು ಉಳಿಸುವ ಜವಾಬ್ದಾರಿಯೂ ಇದೆ, ಸಮಾಜವನ್ನು ರಕ್ಷಿಸುವ ಜವಾಬ್ದಾರಿಯೂ ಇದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಜೊತೆ ಹೆಗಲುಕೊಡಬೇಕಾದಂತ ಉನ್ನತವಾದ ಹೊಣೆಗಾರಿಕೆ ಸಹ ಇದೆ. ಗೃಹರಕ್ಷಕರು ದೇಶದ ಒಳಗಿನ ಸೈನಿಕರು ಎಂದು ನುಡಿದರು. ಗೃಹರಕ್ಷಕದಳದಲಿದ್ದುಕೊಂಡು ಖಾಕಿ ಸಮವಸ್ತ್ರ್ಲದ ಮೇಲೆ ಇರುವ ಗೌರವವನ್ನು ಉಳಿಸಿಕೊಂಡು ನಿಷ್ಕಾಮ ಸೇವೆ ಸೇವೆಯೇ ಪರಮಗುರಿ ಎನ್ನುವ ಉದ್ದೇಶದೊಂದಿಗೆ ಕೆಲಸ ಮಾಡಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ 10 ದಿನಗಳ ವಾರ್ಷಿಕ ತರಬೇತಿ ಶಿಬಿರನ್ನು ಉತ್ತಮವಾಗಿ ನಡೆಸಿಕೊಟ್ಟ ಬೋಧಕರಾದ ಶ್ರೀ ಚಂದನ್ ಮತ್ತು ಶ್ರೀ ಅಕ್ಷಯ್ ಕುಮಾರ್ ಅವರಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ, ಹಾರಹಾಕಿ ಸನ್ಮಾನಿಸಿದರು. ಕ್ಯಾಂಪ್ ಕಮಾಂಡರ್ ಆದ ಶ್ರೀ ಮಾರ್ಕ್‍ಶೇರಾ, ಸೀನಿಯರ್ ಪ್ಲಟೂನ್ ಕಮಾಂಡರ್, ಮಂಗಳೂರು ಘಟಕದ ಘಟಕಾಧಿಕಾರಿಯವರಿಗೆ ನೆನಪಿಗೆ ಕಾಣಿಕೆಯನ್ನು ನೀಡಲಾಯಿತು. ತರಬೇತಿ ಶಿಬಿರದಲ್ಲಿ ಭಾಗವಹಿಸಿದ ಹೊಸದಾಗಿ ನೋಂದಾಯಿತರಾದ ಗೃಹರಕ್ಷಕ ಶ್ರೀ ಮಾಲನ್ ಡಿ’ಸೋಜ, ಕುಮಾರಿ ಜಯಲಕ್ಷ್ಮಿ ಮತ್ತು ಶ್ರೀ ವಿಠಲ್ ಪೂಜಾರಿ ಮತ್ತು ಇವರು ತಮ್ಮ ಅನಿಸಿಕೆಗಳನ್ನು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಛೇರಿ ಅಧೀಕ್ಷಕರಾದ ಶ್ರೀ ಬಿ.ಎನ್. ಗೋಪಿನಾಥ್ ಅವರು ಸ್ವಾಗತ ಭಾಷಣ ಮಾಡಿದರು ಮತ್ತು ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರತಿಜ್ಞಾವಿಧಿಯನ್ನು ಬೋಧಕರಾದ ಶ್ರೀ ಚಂದನ್ ಅವರು ಬೋಧಿಸಿದರು. ಕುಮಾರಿ ಸೌಜನ್ಯಾ ಅವರು ಪ್ರಾರ್ಥನೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಗೃಹರಕ್ಷಕರಾದ ಸುನಿಲ್, ಜ್ಞಾನೇಶ್, ದಿವಾಕರ್, ಆಶಾ, ಆಶಾಲತಾ, ಜೀವನ್ ಡಿ’ಸೋಜ ಹಾಗೂ 60 ಮಂದಿ ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular