ಪೆರ್ಲ: ಲೋಕಸಭಾ ಚುನಾವಣೆಯ ಯುಡಿಎಫ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ ಅವರ ಗೆಲುವಿಗಾಗಿ ಎಣ್ಮಕಜೆ ಪಂಚಾಯತು ಯುಡಿಎಫ್ ಚುನಾವಣಾ ಸಮಿತಿ ರೂಫೀಕರಣ ಸಭೆ ಪೆರ್ಲದ ಇಂದಿರಾ ಭವನದಲ್ಲಿ ಜರಗಿತು. ರವೀಂದ್ರನಾಥ ನಾಯಕ್ ಶೇಣಿ ಸಭೆಯ ಅಧ್ಯಕ್ಷತೆವಹಿಸಿದ್ದರು. ಮುಸ್ಲಿಂಲೀಗ್ ಜಿಲ್ಲಾ ಸಮಿತಿ ಅಧ್ಯಕ್ಷ ಕಲ್ಲಟ್ರ ಮಾಹೀನ್ ಹಾಜಿ ಸಭೆಯನ್ನು ಉದ್ಘಾಟಿಸಿದರು. ಮಂಜೇಶ್ವರ ಶಾಸಕ ಎಕೆಎಂ ಆಶ್ರಫ್ ಸಭೆಯಲ್ಲಿ ಮಾತನಾಡುತ್ತಾ ಮತೀಯ ಸಾಮಾರಸ್ಯಕ್ಕೆ ಕೊಡುಗೆ ನೀಡುವ ಎಣ್ಮಕಜೆಯ ಜನತೆ ಶಾಂತಿ ಸಮಾಧಾನಕ್ಕಾಗಿ ಹಾಗೂ ನಾಡಿನ ಅಭಿವೃದ್ಧಿಗಾಗಿ ಈ ಚುನಾವಣೆಯಲ್ಲೂ ಯುಡಿಎಫ್ ನ್ನು ಬೆಂಬಲಿಸಲಿದ್ದಾರೆ ಎಂದರು. ಹಾಲಿ ಸಂಸದ ಯುಡಿಎಫ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ ತಾನು ಕಳೆದ ಐದು ವರ್ಷಗಳಲ್ಲಿ ನಡೆಸಿ ಅಭಿವೃದ್ಧಿ ಕೆಲಸಗಳನ್ನು ಪ್ರಸ್ತಾವಿಸಿಕೊಂಡು ಮತ ಯಾಚನೆ ನಡೆಸಿದರು. ಡಿಸಿಸಿ ಪ್ರ.ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್,ಯುಡಿಎಫ್ ನೇತಾರರಾದ ಮಂಜುನಾಥ ಆಳ್ವ ಮಡ್ವ, ಅಸೀಸ್ ಮರಿಕೆ ಮೊದಲಾದವರು ಭಾಗವಹಿಸಿದ್ದರು. ಬಳಿಕ ಚುನಾವಣಾ ಸಮಿತಿ ಘೋಷಿಸಲಾಯಿತು. ಹಮಿದಾಲಿ ಸ್ವಾಗತಿಸಿ ಬಿ.ಎಸ್. ಗಾಂಭೀರ್ ವಂದಿಸಿದರು. ಬಳಿಕ ಪೆರ್ಲ ಪೇಟೆಯಲ್ಲಿ ಕಾರ್ಯಕರ್ತರು ಅಭ್ಯರ್ಥಿಯನ್ನೊಳಗೊಂಡ ರೋಡ್ ಶೋ ನಡೆಸಲಾಯಿತು.