ಬ್ರಹ್ಮಾವರ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮಗ್ರ ಜೀಣೋದ್ದಾರದ ಮೊದಲ ಹಂತವಾಗಿ ಬುಧವಾರ ಧ್ವಜಕಂಬವನ್ನು ಭವ್ಯ ಪುರಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ತರಲಾಯಿತು.
ದೇವಳದ ಆಡಳಿತಾಧಿಕಾರಿ ಕೆ. ರಾಜು, ಪವಿತ್ರಪಾಣಿ ಅನಂತಪದ್ಮನಾಭ ವಾರಂಬಳ್ಳಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಬಿ.ಗೋವಿಂದರಾಜ ಹೆಗ್ಡೆ ಗೌರವಾಧ್ಯಕ್ಷ ಅಶೋಕ್ ಭಟ್ ಚಾಂತಾರು ಮತ್ತು ಪ್ರಧಾನ ಕಾರ್ಯದರ್ಶಿಗಳಾದ ವಿಶ್ವನಾಥ ಶೆಟ್ಟಿ ಮಟಪಾಡಿ, ಸೂರ್ಯನಾರಾಯಣ ಗಾಣಿಗ, ಜೀಣೋದ್ಧಾರ ಸಮಿತಿಯ ಭಕ್ತಾದಿಗಳು ಮತ್ತಿತ್ತರರು ಸದಸ್ಯರುಗಳು, 8 ಮಾಗಣೆಯವರು ಉಪಸ್ಥಿತರಿದ್ದರು.