ಐಟಿಸಿ ಲಿಮಿಟೆಡ್ ತನ್ನ ಸಾಮಾಜಿಕ ಹೂಡಿಕೆ ವಿಭಾಗವಾದ ಐಟಿಸಿ ಮಿಷನ್ ಸುನೆಹ್ರಾ ಕಲ್’ ನಡಿಯಲ್ಲಿ ಅದರ ಪಾಲುದಾರ ಎನ್‌ಜಿಒ ಬಯೋಮ್ ಎನ್ವಿರಾನ್‌ಮೆಂಟಲ್ ಟ್ರಸ್ಟ್ ಜೊತೆಗೆ ಹಾಗು ದೇವನಹಳ್ಳಿ ಪುರಸಭೆ ಸಹಯೋಗದೊಂದಿಗೆ ದೇವನಹಳ್ಳಿ ಪುರಸಭೆಯಲ್ಲಿ ಪರಿಸರ ಹಬ್ಬ ನೀರು, ತ್ಯಾಜ್ಯ ಮತ್ತು ಜೈವಿಕ ವೈವಿಧ್ಯತೆಯ ಕುರಿತು ಪ್ರದರ್ಶನ’, ಪುರಸಭೆಯ ವಾಟರ್ ಮೆನ್’ಗಳಿಗೆ ಸುಸ್ಥಿರ ನೀರು ನಿರ್ವಹಣೆಯ ತರಬೇತಿ ಮತ್ತು ಪುರಸಭೆಯ ಸದಸ್ಯರೊಂದಿಗೆ ಸಭೆಯನ್ನು, ಮಾರ್ಚ್ 19, 2025 ರಂದು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ದೇವನಹಳ್ಳಿ ಪುರಸಭೆಯ ಅಧ್ಯಕ್ಷರಾದ . ಡಿ.ಎಂ.ಮುನಿಕೃಷ್ಣ, ಡಿಟಿಎಂಸಿ ಉಪಾಧ್ಯಕ್ಷರಾದ ಜಿ.ಎ. ರವೀಂದ್ರ, ಡಿಟಿಎಂಸಿ ಸದಸ್ಯರಾದ ರಘು, ಡಿಟಿಎಂಸಿ ಸಿಇಒ ದೊಡ್ಡಮಳವಯ್ಯ, ಪುರಸಭೆಯ ಎಲ್ಲಾ ಸದಸ್ಯರು, ಎಂಜಿನಿಯರ್‌ಗಳು ಮತ್ತು ಬಯೋಮ್ ಟ್ರಸ್ಟ್’ನ ಸಿಬ್ಬಂದಿ ಭಾಗವಹಿಸಿದ್ದರು.
ಪರಿಸರ ಹಬ್ಬ ಪ್ರದರ್ಶನವು ದೇವನಹಳ್ಳಿಯ ನೀರು ಸರಬರಾಜಿಗೆ ಮೇಲ್ಸ್ತರದ ಅಂತರ್ಜಲವನ್ನು ಸಂಯೋಜಿಸುವುದು” ಯೋಜನೆಯ ಮಾದರಿ ಮತ್ತು ಅದರ ಕುರಿತಾದ ಕಿರುಪುಸ್ತಕವನ್ನು ಒಳಗೊಂಡಂತೆ ಸುಸ್ಥಿರ ನೀರು ನಿರ್ವಹಣಾ ಪದ್ಧತಿಗಳಿಗೆ ಸಂಬಂಧಿಸಿದ ಮಾಹಿತಿ ಶಿಕ್ಷಣ ಮತ್ತು ಸಂವಹನ ವಸ್ತುಗಳ ಪ್ರದರ್ಶನವನ್ನು ಒಳಗೊಂಡಿತ್ತು.
ಇದೇ ಸಂದರ್ಭದಲ್ಲಿ, ಸುಸ್ಥಿರ ನೀರು ನಿರ್ವಹಣೆ ತರಬೇತಿಗೆ ಹಾಜರಾದ ವಾಟರ್ ಮೆನ್’ಗಳಿಗೆೆ ಪುರಸಭೆಯ ಸದಸ್ಯರು ತರಬೇತಿ ಕಿಟ್‌ಗಳನ್ನು ನೀಡಿದರು.
ನಂತರ, ಬಯೋಮ್‌ನ ಅವಿನಾಶ್ ಎಲ್ಲಾ ಸದಸ್ಯರಿಗೆ “ದೇವನಹಳ್ಳಿಯ ನೀರು ಸರಬರಾಜಿಗೆ ಮೇಲ್ಸ್ತರದ ಅಂತರ್ಜಲದ ಸಂಯೋಜನೆ” ಅನುಷ್ಠಾನದ ಕುರಿತು ವಿವರಿಸಿದರು. ಯೋಜನೆಯ ಮೊದಲನೇ ಮತ್ತು ಎರಡನೇ ಹಂತದಿಂದ ಈಗಾಗಲೇ, ಪ್ರತಿದಿನ 640 ಕಿಲೋ ಲೀಟರ್ ನೀರನ್ನು ಒಂದು ತೆರೆದ ಬಾವಿ ಮತ್ತು ಆರು ಫಿಲ್ಟರ್ ಬೋರ್ವೆಲ್’ಗಳನ್ನೂ ಒಳಗೊಂಡು ಮೇಲ್ಸ್ತರದ ಅಂತರ್ಜಲದಿಂದ ದೇವನಹಳ್ಳಿ ಪಟ್ಟಣಕ್ಕೆ ಸರಬರಾಜು ಮಾಡಲಾಗುತ್ತಿದೆ. ನೀರು ಶುದ್ದೀಕರಣ ಘಟಕದಲ್ಲಿ ಸಂಸ್ಕರಣೆಗೊಳ್ಳುವ ಈ ನೀರು BIS 10500 ಮಾನದಂಡವನ್ನು ಪೂರೈಸುತ್ತದೆ.
ದೊಡ್ಡಕೆರೆ ಬಳಿ ಯೋಜನೆಯ 3 ನೇ ಹಂತವನ್ನು ಪೂರ್ಣಗೊಳಿಸಲು ಸಹಾಯ ಮಾಡಲು, ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳು ನಿರ್ವಹಣೆಗೆ ಪುರಸಭೆಯ ಸಹಕಾರವನ್ನು ಅವರು ಕೋರಿದರು. ಸಿಹಿನೀರು ಕೆರೆ ಬಳಿಯ ಹಂತ 1 ಮತ್ತು ಹಂತ 2 ಅನ್ನು 640 ಕೆಎಲ್‌ಡಿಯಿಂದ 1000 ಕೆಎಲ್‌ಡಿ (1 ಎಂಎಲ್‌ಡಿ) ಗೆ ವಿಸ್ತರಿಸುವಂತೆ ಅವರು ಡಿಟಿಎಂಸಿಯನ್ನು ಒತ್ತಾಯಿಸಿದರು.
“ದೇವನಹಳ್ಳಿಯ ನೀರು ಸರಬರಾಜಿಗೆ ಮೇಲ್ಸ್ತರದ ಅಂತರ್ಜಲದ ಸಂಯೋಜನೆ ಆಳವಿಲ್ಲದ ಜಲಚರವನ್ನು ಸಂಯೋಜಿಸುವುದು” ಯೋಜನೆಯ ವಿವರಗಳು ಮತ್ತು ಅದರ ಪರಿಣಾಮಗಳನ್ನು ಒಳಗೊಂಡ ದೇವನಹಳ್ಳಿ ಕಿರುಪುಸ್ತಕವನ್ನು ಪುರಸಭೆಯ ಎಲ್ಲಾ ಸದಸ್ಯರುಗಳು ಮತ್ತು ಎಂಜಿನಿಯರ್‌ಗಳಿಗೆ ವಿತರಿಸಲಾಯಿತು.
2024-25ನೇ ಸಾಲಿನಲ್ಲಿ, ಬಯೋಮ್ ಟ್ರಸ್ಟ್, ಐಟಿಸಿ ಮಿಷನ್ ಸುನೆಹ್ರಾ ಕಲ್ ಅಡಿಯಲ್ಲಿ, 100 ಕ್ಕೂ ಹೆಚ್ಚು ವಾಟರ್ ಮೆನ್’ಗಳು, 100 ಮಹಿಳಾ ಪ್ಲಂಬರ್‌ಗಳು ಸೇರಿದಂತೆ 300 ಪ್ಲಂಬರ್‌ಗಳಿಗೆ ಸುಸ್ಥಿರ ನೀರಿನ ನಿರ್ವಹಣೆಯ ಕುರಿತು ತರಬೇತಿ ನೀಡಿದೆ ಮತ್ತು ಅವರ ದೈನಂದಿನ ಕೆಲಸಕ್ಕೆ ಸಹಾಯ ಮಾಡಲು ತರಬೇತಿ ಕಿಟ್‌ಗಳನ್ನು ಸಹ ವಿತರಿಸಿದೆ.
ಅಪಾರ್ಟ್‌ಮೆಂಟ್‌ಗಳು ಮತ್ತು ಲೇಔಟ್’ಗಳಿಗೆ ನೀರಿನ ನಿರ್ವಹಣೆಯ ಉತ್ತಮ ಅಭ್ಯಾಸಗಳು, ಜಲ ಪರಂಪರೆಯ ರಚನೆಗಳ ದಾಖಲಾತಿ, ತೆರೆದ ಬಾವಿ ಪರಂಪರೆ, ಬೆಂಗಳೂರು ಮತ್ತು ಅದರ ಕೆರೆಗಳು, ರೀಚಾರ್ಜ್ ಬಾವಿ ಪ್ರೈಮರ್, ಬೋರ್‌ವೆಲ್ ಪ್ರೈಮರ್, ಕುಡಿಯುವ ಮತ್ತು ಬಳಸುವ ನೀರಿಗಾಗಿ ಮಳೆನೀರು ಕೊಯ್ಲು ಕುರಿತು ಕನ್ನಡ ಮತ್ತು ಇಂಗ್ಲಿಷ್ ಕಿರುಪುಸ್ತಕಗಳ ಕುರಿತು ಸುಮಾರು 600 ಮಾಹಿತಿ ಶಿಕ್ಷಣ ಮತ್ತು ಮಾಹಿತಿ ಕಿರುಪುಸ್ತಕಗಳನ್ನು ಅಭಿವೃದ್ಧಿಪಡಿಸಿ ವಿತರಿಸಲಾಗಿದೆ.
ಉತ್ತಮ ನೀರು ನಿರ್ವಹಣಾ ಪದ್ಧತಿಗಳ ಪ್ರದರ್ಶನವಾಗಿ, ಬಾಲಾಜಿ ಲೇಔಟ್, ಸಾತನೂರಿನಲ್ಲಿ 2 ಇಂಗು ಬಾವಿಗಳನ್ನು ತೋಡಲಾಗಿದೆ ಮತ್ತು 50 ನಲ್ಲಿಗಳಿಗೆ ಏರೇಟರ್‌ಗಳನ್ನು ಅಳವಡಿಸಲಾಗಿದೆ. ಹುಣಸಮಾರನಹಳ್ಳಿ ಪುರಸಭೆ ಕಟ್ಟಡಕ್ಕೆ ಮಳೆನೀರು ಕೊಯ್ಲು ಅಳವಡಿಸಲಾಗಿದೆ ಮತ್ತು ಹುಣಸಮಾರನಹಳ್ಳಿಯ ಒಂದು ಆರ್ .ಓ ಪ್ಲಾಂಟ್’ನಲ್ಲಿ ಆರ್ .ಓ ರಿಜೆಕ್ಟ್ ನೀರಿನ ಮರುಬಳಕೆಯನ್ನು ಪ್ರದರ್ಶಿಸಲಾಗಿದೆ.
ಯಲಹಂಕ ತಾಲ್ಲೂಕು ಪಂಚಾಯತ್, ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಮತ್ತು ದೇವನಹಳ್ಳಿ ಟಿಎಂಸಿಯಲ್ಲಿ ತಲಾ ಒಮ್ಮೆ ಪರಿಸರ ಹಬ್ಬಗಳು ಮತ್ತು ಮೂರು ಪಾಲುದಾರರ ಸಭೆಗಳನ್ನು ನಡೆಸಲಾಗಿದೆ. ಐಟಿಸಿ ಪಾಲುದಾರ ಏನ್.ಜಿ.ಓ’ಗಳು ಮಳೆ ನೀರು ಕೊಯ್ಲು ಅಳವಡಿಸಿರುವ 30 ಕ್ಕೂ ಹೆಚ್ಚು ಶಾಲೆಗಳಲ್ಲಿ ಮಳೆನೀರು ಕೊಯ್ಲು ಮತ್ತು ನೀರಿನ ಗುಣಮಟ್ಟದ ಜಾಗೃತಿ ಫಲಕಗಳು, 10 ಕ್ಕೂ ಹೆಚ್ಚು ಪಂಚಾಯತ್‌ಗಳು ಮತ್ತು 2 ಟಿಎಂಸಿ ಕಚೇರಿಗಳಲ್ಲಿ ಅತ್ಯುತ್ತಮ ನೀರು ನಿರ್ವಹಣಾ ಅಭ್ಯಾಸಗಳ ಕುರಿತು ಪ್ರದರ್ಶನ ಫಲಕಗಳನ್ನು ಸೇರಿ 80 ಕ್ಕೂ ಹೆಚ್ಚು ಪ್ರದರ್ಶನ ಫಲಕಗಳನ್ನು ಸ್ಥಾಪಿಸಲಾಗಿದೆ.
