Monday, December 2, 2024
Homeಶಿಕ್ಷಣಕಣಾದ ಕನ್ನಡ ವಾರ್ಷಿಕ ವಿಜ್ಞಾನ ಪತ್ರಿಕೆ ಯ 50ನೇ ಸಂಚಿಕೆಯ ಪ್ರಕಟಣೆಯ ಪ್ರಬಂಧ ಸ್ಪರ್ಧೆ ಇಂದುಮತಿಗೆ...

ಕಣಾದ ಕನ್ನಡ ವಾರ್ಷಿಕ ವಿಜ್ಞಾನ ಪತ್ರಿಕೆ ಯ 50ನೇ ಸಂಚಿಕೆಯ ಪ್ರಕಟಣೆಯ ಪ್ರಬಂಧ ಸ್ಪರ್ಧೆ ಇಂದುಮತಿಗೆ ರಾಜ್ಯ ಮಟ್ಟದಲ್ಲಿ ತೃತೀಯ ಬಹುಮಾನ

ಬೆಳಾಲು: ನ.19:ಕನ್ನಡ ಸಾಂಸ್ಕೃತಿಕ ಸಂಘ, ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಮಂಡಳಿ, ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗ ಶಾಲೆಗಳು, ಬೆಂಗಳೂರು. ಇವರು ಪ್ರಕಟಿಸುವ ಕಣಾದ ಕನ್ನಡ ವಾರ್ಷಿಕ ವಿಜ್ಞಾನ ಪತ್ರಿಕೆ ಯ 50ನೇ ಸಂಚಿಕೆಯ ಪ್ರಕಟಣೆಯ ಸಂದರ್ಭದಲ್ಲಿ, ರಾಜ್ಯದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿವಿಧ ವಿಷಯಗಳಲ್ಲಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆ ಬೆಳಾಲು ಇಲ್ಲಿನ ವಿದ್ಯಾರ್ಥಿನಿ ಇಂದುಮತಿ ಹಣ್ಣು, ತರಕಾರಿ, ಧಾನ್ಯಗಳ ಸಂರಕ್ಷಣಾ ವಿಧಾನಗಳಲ್ಲಿ ಪ್ರಗತಿ ಈ ವಿಷಯದಲ್ಲಿ ರಚಿಸಿದ ಪ್ರಬಂಧಕ್ಕೆ ರಾಜ್ಯ ಮಟ್ಟದಲ್ಲಿ ತೃತೀಯ ಬಹುಮಾನ ಬಂದಿರುತ್ತದೆ. ಈ ಪ್ರಬಂಧದ ಪ್ರಕಟಣೆಯು 2024 ನವಂಬರ್ 27ರಂದು ಕಣಾದ ಪತ್ರಿಕೆಯ 50ನೇ ಸಂಚಿಕೆಯ ಪ್ರಕಟಣೆಯ ಸಂದರ್ಭದಲ್ಲಿ ಪ್ರಕಟಿಸಲಾಗುತ್ತದೆ ಎಂದು ಸಂಘಟಕರು ತಿಳಿಸಿರುವುದಾಗಿ ಶಾಲಾ ಮುಖ್ಯೋಪಾಧ್ಯಾಯರಾದ ಜಯರಾಮ ಮಯ್ಯ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

RELATED ARTICLES
- Advertisment -
Google search engine

Most Popular